ಉಳ್ಳಾಲ, ಜೂ 15 (DaijiworldNews/MS): ಇಲ್ಲಿನ ಮನೆಯೊಂದಕ್ಕೆ ರೂ.7 ಲಕ್ಷ ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಕಂಡ ಮನೆ ಮಾಲೀಕರು ನಿಬ್ಬೆರಗಾಗಿದ್ದಾರೆ.

ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬವರಿಗೆ ಬಿಲ್ ನೀಡಿರುವ ಮೀಟರ್ ರೀಡರ್ ನೀಡಿರುವ ಬಿಲ್ ಗಮನಿಸಿದ ಮನೆಮಂದಿಗೆ ಒಮ್ಮೆಗೆ ದಿಗಿಲು ಬಡಿದಂತಾಗಿದೆ. ಬಿಲ್ ಪಡೆದ ತಕ್ಷಣ ಮನೆಮಂದಿ ರೀಡರ್ ಬಳಿ ವಿಚಾರಿಸಿದಾಗ , ಕಚೇರಿಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ದಾರೆ.
ವಿದ್ಯುತ್ ಬಿಲ್ ರಿಸಿಪ್ಟಲ್ಲಿ 99,338 ಯೂನಿಟ್ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ.ತಮಗೆ ಈ ಮೊದಲು ರೂ. 3,000 ದಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು.ನಾವು ಪ್ರತಿ ತಿಂಗಳು ಬಿಲ್ಲನ್ನು ಕಟ್ಟುತ್ತೇವೆ .ಈ ತಿಂಗಳು ಬಂದ ಬಿಲ್ಲನ್ನ ನೋಡಿ ಮನೆ ಮಂದಿ ಎಲ್ಲ ನಿಜಕ್ಕೂ ಶಾಕ್ ಆದೆವು ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ಹೇಳಿದ್ದಾರೆ.
"ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ.ಬಿಲ್ ರೀಡರ್ನ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ಲಲ್ಲಿ ಲೋಪ ಕಂಡು ಬಂದರೆ ಅದನ್ನ ಗ್ರಾಹಕರಿಗೆ ಕೊಡುವಂತಿಲ್ಲ.ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ ಪರಿಷ್ಕೃತ ಬಿಲ್ ತಲುಪಿಸುವುದಾಗಿ ಹೇಳಿದ್ದು ಇಂದು ಮದ್ಯಾಹ್ನದ ವೇಳೆ ಪರಿಷ್ಕೃತ 2,833 ರೂಪಾಯಿಗಳ ಬಿಲ್ ಆಚಾರ್ಯ ಅವರ ಮನೆ ತಲುಪಿದೆ" - ದಯಾನಂದ ಕಾರ್ಯನಿರ್ವಾಹಕ ಅಭಿಯಂತರಮೆಸ್ಕಾಂ ಉಪವಿಭಾಗ, ಉಳ್ಳಾಲ