ಮಂಗಳೂರು,ಜೂ 15 (DaijiworldNews/MS):ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸರ್ವರ್ ನಿರ್ವಹಣಾ ಕಾರ್ಯ ಇದೇ ಜೂ.28ರಿಂದ ಕೈಗೊಳ್ಳಲಾಗುತ್ತಿದೆ.

ಹೀಗಾಗಿ ಪಡಿತರ ಚೀಟಿದಾರರು 2023ರ ಜೂನ್ ಮಾಹೆಯ ಪಡಿತರವನ್ನು ಇದೇ ಜೂ.27ರೊಳಗೆ ನ್ಯಾಯ ಬೆಲೆ ಅಂಗಡಿಗಳಿಂದ ಪಡೆಯುವಂತೆ ಕೋರಲಾಗಿದ್ದು, ಜೂ.27ರ ನಂತರ ತಿಂಗಳ ಪಡಿತರವನ್ನು ವಿತರಿಸಲು ಅವಕಾಶವಿರುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.