ಕಾಸರಗೋಡು, ಜೂ. 14 (DaijiworldNews/SM): ಅಪ್ರಾಪ್ತ ಬಾಲಕನಿಗೆ ಮಾದಕ ವಸ್ತು ನೀಡಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಚಾಯತ್ ಸದಸ್ಯನೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮುಳಿಯಾರು ಪೊವ್ವಲ್ ನ ಮುಹಮ್ಮದ್ ಕುಂಞ ಬಂಧಿತ ಆರೋಪಿ. ಈತ ಮುಸ್ಲಿಂ ಲೀಗ್ ಮುಖಂಡನಾಗಿದ್ದಾನೆ. ಪೋಕ್ಸೋ ಕಾಯ್ದೆಯಂತೆ ಈತನ ಮೇಲೆ ಪ್ರಕರಣ ದಾಖಲಿಸಿ ಕೊಂಡಿದ್ದು , ಮಂಗಳವಾರ ಸಂಜೆ ಬಂಧಿಸಲಾಗಿದೆ.
ಏಪ್ರಿಲ್ 11 ರಂದು ರಾತ್ರಿ ಘಟನೆ ನಡೆದಿತ್ತು. ಮಾದಕ ಪದಾರ್ಥ ನೀಡಿ ಕಿರುಕುಳ ನೀಡಿದ್ದಾಗಿ ದೂರು ನೀಡಲಾಗಿತ್ತು. 14ರ ಹರೆಯದ ಬಾಲಕನ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಈತ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಅರ್ಜಿ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ತನಿಖಾ ತಂಡದ ಮುಂದೆ ಹಾಜರಾಗುವಂತೆ ತೀರ್ಫು ನೀಡಿತ್ತು.
ಇದರಂತೆ ಮಂಗಳವಾರ ಸಂಜೆ ಆದೂರು ಪೊಲೀಸ್ ಠಾಣೆಗೆ ಹಾಜರಾದ ಈತನನ್ನು ಪೊಲೀಸರು ಬಂಧಿಸಿದ್ದು , ಬುಧವಾರ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮುಹಮ್ಮದ್ ಕುಂಞ ಮುಸ್ಲಿಂ ಲೀಗ್ ಮುಖಂಡನಾಗಿದ್ದಾನೆ.