ಕಾರ್ಕಳ ಜೂ 14 (DaijiworldNews/MS): ಕಳೆದ ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಹೆಬ್ರಿ ಪೊಲೀಸರು ದಸ್ತಗಿರಿಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಚಿಕ್ಕಮಂಗಳೂರು ಆಲ್ದೂರು ಹಾಂದಿ ಇಂದಿರಾ ನಗರದ ಸಂತೋಷ(38) ವಿರುದ್ಧ 2010ರಲ್ಲಿ ಹೆಬ್ರಿ ಠಾಣೆಯಲ್ಲಿ ಕೇಸೊಂದು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಸಂತೋಷ ಶೆಟ್ಟಿ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಗ್ರಾಮದ ಹಾಂದಿಯ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಸಂತೋಷ ಕೆಲಸ ಮಾಡುತ್ತಿದ್ದನೆಂಬ ಮಾಹಿತಿ ಕಲೆ ಹಾಕಿದ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಮತ್ತು ಪೊಲೀಸ್ ಉಪಾ ಅಧೀಕ್ಷಕರು ಕಾರ್ಕಳ ಉಪ ವಿಭಾಗ ಹಾಗೂ ವೃತ್ತ ನಿರೀಕ್ಷಕರು ಕಾರ್ಕಳ ವೃತ್ತ ಇವರ ನಿರ್ದೇಶನದಲ್ಲಿ ಹೆಬ್ರಿ ಠಾಣಾ ಪಿ ಎಸ್ ಐ ಸುದರ್ಶನ್ ದೊಡಮನಿ ರವರ ಮಾರ್ಗದರ್ಶನದಲ್ಲಿ ಸಿ ಎಚ್ ಸಿ ಸುರೇಶ್ ಎಚ್ ಮತ್ತು ಸಿಪಿಸಿ ಸದಾನಂದ ಆರೋಪಿಯನ್ನು ಬಂಧಿಸಿದ್ದಾರೆ.