ಮಂಗಳೂರು, ಜೂ 14 (DaijiworldNews/MS): ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಮಂಗಳೂರಿನ ಪ್ರತಿಷ್ಠಿತ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಭೈರೇಶ್ ಎಸ್.ಎಚ್. 48ನೇ ರ್ಯಾಂಕ್ ಪಡೆದ ಸಾಧನೆ ಮಾಡಿದ್ದಾರೆ. ಭೈರೇಶ್ ಎಸ್.ಎಚ್. ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯ ಹರೀಶ್ ಎಸ್.ಬಿ. ಹಾಗೂ ರಾಧಮ್ಮ ಕೆ. ದಂಪತಿ ಪುತ್ರರಾದ ಭೈರೇಶ್ ಮಂಗಳೂರು ಎಕ್ಸ್ಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 710 ಅಂಕ ಗಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ 48ನೇ ರ್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆಭೈರೇಶ್ ಅವರು ಫಿಸಿಕ್ಸ್ನಲ್ಲಿ 99.9454527 ಪರ್ಸೆಂಟೈಲ್, ಕೆಮೆಸ್ಟ್ರಿಯಲ್ಲಿ 99.9826842 ಪಸೆಂಟೈಲ್, ಬಯಾಲಜಿಯಲ್ಲಿ 99.9566368 ಪಸೆಂಟೈಲ್ ಸಹಿತ ಒಟ್ಟು 99.9962719 ಪಸೆಂಟೈಲ್ ಪಡೆದಿದ್ದಾರೆ.
ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಸಾಧಕ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.