ಕಾಸರಗೋಡು, ಜೂ 10 (DaijiworldNews/HR): ಮನೆಯ ಟೆರೆಸ್ ಗೆ ತಾಗಿಕೊಂಡಿದ್ದ ಮರದ ರೆಂಬೆ ಕಡಿದು ತೆಗೆಯುತ್ತಿದ್ದಾಗ ಕೆಳ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಮಂಜೇಶ್ವರ ಕೊಪ್ಪಳ ಪಾವೂರಿನ ಮುಹಮ್ಮದ್ (63) ಮೃತ ಪಟ್ಟವರು.
ಮನೆಯ ಆವರಣ ಗೋಡೆಯ ಮೇಲೆ ಹತ್ತಿ ರೆಂಬೆಯನ್ನು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡ ಮುಹಮ್ಮದ್ ರವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.