ಬೈಂದೂರು, ಮೇ 10 (DaijiworldNews/HR): ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಕನ್ಯಾನ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.


ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಪತ್ನಿ ಹಾಗೂ ಕುಟುಂಬಿಕರೊಂದಿಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಇನ್ನು ಕನ್ಯಾನ ಶಾಲೆಯ ಮತಗಟ್ಟೆಯಲ್ಲಿ ಗೋಪಾಲ ಪೂಜಾರಿ ಅವರು ಮೊದಲ ಮತದಾನ ಮಾಡಿದ್ದು, ಈ ವೇಳೆ ಇವಿಎಂ ಯಂತ್ರದ ಬಳಿ ಹೆಸರು, ಚಿಹ್ನೆ ಅಸ್ಪಷ್ಟ ಕಾಣಿಸುತ್ತಿದ್ದು ಬೆಳಕಿನ ಕೊರತೆ ಕಂಡು ಬಂದಿರುವುದನ್ನು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.