ಕಾಸರಗೋಡು, ಮಾ 16(SM): ಕಾಸರಗೋಡು ನಗರಸಭಾ ನೌಕರರೋರ್ವರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ನಗರಸಭಾ ಆರೋಗ್ಯ ಇಲಾಖೆ ಕ್ಲರ್ಕ್ ಶಿಬಿನ್ ರಾಜೇಶ್(33) ಆತ್ಮಹತ್ಯೆ ಮಾಡಿಕೊಂಡವರು. ಕೂಡ್ಲು ಸಮೀಪ ವಸತಿಗೃಹದಲ್ಲಿ ವಾಸವಾಗಿದ್ದ ಇವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೋಜಿಕ್ಕೋಡ್ ನಿವಾಸಿಯಾಗಿದ್ದ ಶಿಬಿನ್, ಎರಡು ವರ್ಷಗಳಿಂದ ಕಾಸರಗೋಡು ನಗರಸಭೆಯಲ್ಲಿ ನೌಕರಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಏಕಾಏಕಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.