ಮಂಗಳೂರು, ಡಿ06(SS): ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಸರಿಸುಮಾರು 202 ಕುಟುಂಬಗಳಿಗೆ 94 ಸಿಸಿ ಯೋಜನೆ ಅಡಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿದರು. ಜನರು ನಮ್ಮನ್ನು ಆಯ್ಕೆ ಮಾಡಿ ಅವರ ಸೇವೆ ಮಾಡಲು ಅಧಿಕಾರಿಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದರ ಅನ್ವಯ ನಾನು ಜನರ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ಈ ಹಿಂದೆ ಕೆಲ ರಾಜಕೀಯ ನಾಯಕರು ಚುನಾವಣೆಗೆ ಒಂದು ತಿಂಗಳಿರುವ ವೇಳೆ ಮತ ಪಡೆಯುವ ಉದ್ದೇಶದಿಂದ ನಕಲಿ ಹಕ್ಕು ಪತ್ರ ಮಾತ್ರವಲ್ಲದೆ ನಕಲಿ ಯೋಜನೆಗಳ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದರು. ಆದರೆ ನನಗೆ ಈ ಅಧಿಕಾರ ಲಭಿಸಿದ ಬಳಿಕ ಜನರ ಸೇವೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದೇನೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮೂಡುಶೆಡ್ಡೆ, ಆರ್ ಐ ನವೀನ್, ತಾಲೂಕು ಪಂಚಾಯತ್ ಸದಸ್ಯೆ ಕವಿತಾ ದಿನೇಶ್, ಪಿಡಿಓ ಜಯಪ್ರಕಾಶ್ ಕೆ, ತಹಶಿಲ್ದಾರರಾದ ಗರುಫ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.