ಮಂಗಳೂರು,ಡಿ 02 (MSP): ನಗರದ ಸಂತ ಅಗ್ನೇಸ್ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಕಾಲೇಜು ಆವರಣದಲ್ಲಿ ಡಿ.01 ರ ಶನಿವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಲೋಕಾಸೇವಾ ಆಯೋಗದ ಸದಸ್ಯರಾದ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ನೆರವೇರಿಸಿದರು.






























































ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಇದರ ವಿರುದ್ದವಾಗಿ ನಾವು ಹೋರಡಬೇಕು. ವಿದ್ಯಾರ್ಥಿ ಜೀವನ ಒಂದು ಅಮೂಲ್ಯ ಹಂತವಾಗಿದೆ, ಇದು ನಿಮ್ಮ ಸಾಮರ್ಥ್ಯವನ್ನು ಬಳಸಿಕೊಂಡ ಗುರಿ ಮುಟ್ಟಲು ಸಹಾಯಕಾರಿಯಾಗಿದೆ. ಅವಧಿಯನ್ನು ಸುಂದರವಾಗಿ ನಾವು ರೂಪಿಸುವ ಅಗತ್ಯವಿರುತ್ತೆ ಎಂದವರು ಹೇಳಿದರು.
ಕಾರ್ಯಕ್ರಮ ದಲ್ಲಿ ಕಾಲೇಜು ಪ್ರಾಂಶುಪಾಲರಾದ ಸಿಸ್ಠರ್ ಎಂ ಸಮಿತ ಎಸಿ, ಸಿಸ್ಟರ್ ಡಾ.ಮರಿಯ ರೂಪ ಎ.ಸಿ, ವಿದ್ಯಾರ್ಥಿ ಮುಖಂಡೆ ಮಾನ್ಸಿ ಲೀಸ ಪಿಂಟೋ, ಅಧ್ಯಕ್ಷೆ ವಲೆಂಟೀನ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.