ಬೆಳ್ತಂಗಡಿ, ಜ 13 (Daijiworld News/MSP): ಬೆಳ್ತಂಗಡಿ ತಾಲೂಕು ಕುಕ್ಯೇಡಿ ಗ್ರಾಮದ ರತ್ನಾಕರ್ ಅವರು ತನಗೆ ಸಿಕ್ಕಿದ 8,ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ. ರತ್ನಾಕರ್ ಅವರು ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ ಕಳೆದ 6 ತಿಂಗಳಿನಿಂದ ಬೆಳ್ತಂಗಡಿಯಲ್ಲಿ ಅಗ್ನಿ ಶಾಮಕದಳದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ದ.ಕ.ಜಿಲ್ಲಾ ಗೃಹ ರಕ್ಷಕ ದಳದ ಹೋಮ್ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರ್ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.