ಉಳ್ಳಾಲ ಜ 24 : ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಕೊಂಡಾಣದಲ್ಲಿ ಬಂಧಿಸಿದ್ದಾರೆ. ಮಂಜೇಶ್ವರ ಪಾತೂರಿನ ಮಹಮ್ಮದ್ ಮನ್ಸೂರ್ , ಬಾಳೆಪುಣಿಯಲ್ಲಿ ಉಮ್ಮರ್ ಫಾರೂಕ್ ಸಿಯಾದ್, ಹಾಗೂ ತಲಪಾಡಿ ಮಹಮ್ಮದ್ ಅಶ್ರಫ್, ಬಂಧಿತರು. ಆರೋಪಿಗಳು ಕೇರಳದಿಂದ ಕರ್ನಾಟಕ್ಕೆ ಗಾಂಜಾವನ್ನು ಕಾರಿನಲ್ಲಿ ತಂದು ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ .ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಪೊಲೀಸರು, ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದು, ಒಟ್ಟು ಮೌಲ್ಯ, 1.56 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ನ್ಯಾಯಲಾಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
.jpg)
.jpg)
.jpg)
.jpg)