ಉಡುಪಿ, ಅ.01 (DaijiworldNews/AK): ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಾಯ್ಜಿವಲ್ಡ್ ಉಡುಪಿ ಹಾಗೂ ಕಿಶೂ ಎಂಟರ್ಪ್ರೈಸಸ್ ಆಯೋಜಿಸಿದ್ದ ‘ದಾಯ್ಜಿವಲ್ಡ್ ಉಡುಪಿ - ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2026’ರ ಫಲಿತಾಂಶವನ್ನು ಪ್ರಕಟಗೊಂಡಿದೆ.


ಪ್ರಥಮ ಬಹುಮಾನ: ಶ್ರಿಯಾನ್ ಜಿ. ಶೆಟ್ಟಿ, ಮಂಗಳೂರು

ದ್ವಿತೀಯ ಬಹುಮಾನ: ಧಕ್ಷ್ ಎಸ್., ನಂದವಾರ, ಮಂಗಳೂರು

ತೃತೀಯ ಬಹುಮಾನ: ದಕ್ಷ್ಯ ಆರ್.ಪಿ., ಮಂಗಳೂರು

ಸಮಧಾನಕರ ಬಹುಮಾನ - ಗ್ರಂಥ್ ಕೆ. ಗಟ್ಟಿ, ತೊಕ್ಕೊಟ್ಟು, ಮಂಗಳೂರು

ಸಮಧಾನಕರ ಬಹುಮಾನ - ಪಾರ್ಥವಿ ಎಸ್. ಕುಲಾಲ್, ಸಾಣೂರು, ಕಾರ್ಕಳ, ಉಡುಪಿ

ಸಮಧಾನಕರ ಬಹುಮಾನ - ಲವಿಶ್ ಎಸ್. ಶೆಟ್ಟಿ, ಹೆಬ್ರಿ, ಉಡುಪಿ

ಸಮಧಾನಕರ ಬಹುಮಾನ - ಮೋನಿಷ್ಕಾ ಡಿ. ಅಮೀನ್, ಮಂಗಳೂರು

ಸಮಧಾನಕರ ಬಹುಮಾನ - ವಿಹಾನ್ವಿ ಜಿ. ಶೆಟ್ಟಿ, ಕುಂತೂರು, ಮಂಗಳೂರು

ತೀರ್ಪುಗಾರರ ಆಯ್ಕೆ - ಧ್ವನಿ ಮಲ್ಲಯ್ಯ, ಕಾರ್ಕಳ, ಉಡುಪಿ

ತೀರ್ಪುಗಾರರ ಆಯ್ಕೆ - ಹನ್ಶಿತ್ ಪೂಜಾರಿ, ಹೆಜಮಾಡಿ, ಉಡುಪಿ

ತೀರ್ಪುಗಾರರ ಆಯ್ಕೆ - ದೇವನ್ಶ್ ಪೈ, ಕಟಪಾಡಿ, ಉಡುಪಿ

ತೀರ್ಪುಗಾರರ ಆಯ್ಕೆ - ಘನಿಷ್ಕಾ ಎ. ಕೃಷ್ಣ, ರಾಜಪೇಟೆ, ಮಂಡ್ಯ

ತೀರ್ಪುಗಾರರ ಆಯ್ಕೆ - ಕೃಷಿವ್ ಆರ್. ರೈ, ಸುಳ್ಯ, ದಕ್ಷಿಣ ಕನ್ನಡ
ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ, ಕೃಷ್ಣನ ವೇಷಭೂಷಣದಲ್ಲಿ ಮುದ್ದು ಮಕ್ಕಳ ಸುಂದರ ಛಾಯಾಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ಸ್ಪರ್ಧೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 650ಕ್ಕೂ ಅಧಿಕ ಛಾಯಾಚಿತ್ರಗಳು ಸ್ಪರ್ಧೆಗೆ ಸಲ್ಲಿಕೆಯಾಗಿದ್ದವು.
ತೀವ್ರ ಪೈಪೋಟಿಯ ನಡುವೆ ಮಂಗಳೂರಿನ ಶ್ರಿಯಾನ್ ಜಿ. ಶೆಟ್ಟಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ನಂದವಾರದ ಧಕ್ಷ್ ಎಸ್. ದ್ವಿತೀಯ ಬಹುಮಾನ ಹಾಗೂ ಮಂಗಳೂರಿನ ದಕ್ಷ್ಯ ಆರ್.ಪಿ. ತೃತೀಯ ಬಹುಮಾನ ಪಡೆದಿದ್ದಾರೆ.
ಸಮಾಧಾನಕರ ಬಹುಮಾನಕ್ಕೆ ಮಂಗಳೂರಿನ ತೊಕ್ಕೊಟ್ಟಿನ ಗ್ರಂಥ್ ಕೆ. ಗಟ್ಟಿ, ಕಾರ್ಕಳದ ಸಾಣೂರಿನ ಪಾರ್ಥವಿ ಎಸ್. ಕುಲಾಲ್, ಹೆಬ್ರಿಯ ಲವಿಶ್ ಎಸ್. ಶೆಟ್ಟಿ, ಮಂಗಳೂರಿನ ಮೋನಿಷ್ಕಾ ಡಿ. ಅಮೀನ್ ಹಾಗೂ ಮಂಗಳೂರಿನ ಕುಂತೂರಿನ ವಿಹಾನ್ವಿ ಜಿ. ಶೆಟ್ಟಿ ಆಯ್ಕೆಯಾಗಿದ್ದಾರೆ.
ತೀರ್ಪುಗಾರರ ಆಯ್ಕೆ ಪ್ರಶಸ್ತಿಗೆ ಕಾರ್ಕಳದ ಧ್ವನಿ ಮಲ್ಲಯ್ಯ, ಹೆಜಮಾಡಿಯ ಹನ್ಶಿತ್ ಪೂಜಾರಿ, ಕಟಪಾಡಿಯ ದೇವನ್ಶ್ ಪೈ, ಮಂಡ್ಯದ ರಾಜಪೇಟೆಯ ಘನಿಷ್ಕಾ ಎ. ಕೃಷ್ಣ ಹಾಗೂ ಸುಳ್ಯದ ಕೃಷಿವ್ ಆರ್. ರೈ ಆಯ್ಕೆಯಾಗಿದ್ದಾರೆ.
ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಿಗೆ ಕ್ರಮವಾಗಿ ರೂ. 5,000, ರೂ. 3,000 ಹಾಗೂ ರೂ. 2,000 ನಗದು ಬಹುಮಾನ, ಜೊತೆಗೆ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸಮಾಧಾನಕರ ಬಹುಮಾನ ವಿಜೇತರಿಗೆ ತಲಾ ರೂ. 1,000 ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.
ಅಂತಿಮ ಸುತ್ತಿನ ತೀರ್ಪುಗಾರಿಕೆಯನ್ನು ಖ್ಯಾತ ಮಹಿಳಾ ಛಾಯಾಗ್ರಾಹಕಿ ಸುಜಾತಾ ಅಂದ್ರಾದೆ ಹಾಗೂ ಫೋಟೋ ಜರ್ನಲಿಸ್ಟ್ ಸುರಭಿ ರತನ್ ನಡೆಸಿದರು.
ತೀರ್ಪುಗಾರರಾಗಿ ಭಾಗವಹಿಸಿದ ಅನುಭವವನ್ನು ಹಂಚಿಕೊಂಡ ಸುಜಾತಾ ಅಂದ್ರಾದೆ, “ಮಕ್ಕಳನ್ನು ದೇವರಿಗೆ ಹೋಲಿಸಲಾಗುತ್ತದೆ. ಈ ಸ್ಪರ್ಧೆಗೆ ಸಾವಿರಾರು ಮುದ್ದು ಕೃಷ್ಣರ ಛಾಯಾಚಿತ್ರಗಳು ಬಂದಿದ್ದವು. ಅಂತಿಮ ಫಲಿತಾಂಶಕ್ಕಾಗಿ ಅವುಗಳಲ್ಲಿ ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಕೆಲವು ಛಾಯಾಚಿತ್ರಗಳು ಎಐ ಮೂಲಕ ರಚಿಸಲ್ಪಟ್ಟಿರುವುದು ಕಂಡುಬಂದಿತ್ತು. ಸ್ಪರ್ಧೆಯ ನಿಯಮಗಳನ್ನು ಉಲ್ಲಂಘಿಸಿದ ಕಾರಣ ವಾಟರ್ಮಾರ್ಕ್ ಹೊಂದಿದ್ದ ಕೆಲವು ಛಾಯಾಚಿತ್ರಗಳನ್ನು ತಿರಸ್ಕರಿಸಲಾಯಿತು. ಮಕ್ಕಳ ಮುದ್ದುತನವನ್ನು ಆಧರಿಸಿ ತೀರ್ಪು ನೀಡುವುದು ಬಹಳ ಕಷ್ಟವಾಗಿತ್ತು. ಪರಿಕಲ್ಪನೆ, ವೇಷಭೂಷಣ, ಮೇಕಪ್ ಹಾಗೂ ಮಕ್ಕಳ ಮುಖಭಾವಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ” ಎಂದು ಹೇಳಿದರು.
ಫಲಿತಾಂಶ:
ಪ್ರಥಮ ಬಹುಮಾನ: ಶ್ರಿಯಾನ್ ಜಿ. ಶೆಟ್ಟಿ, ಮಂಗಳೂರು
ದ್ವಿತೀಯ ಬಹುಮಾನ: ಧಕ್ಷ್ ಎಸ್., ನಂದವಾರ, ಮಂಗಳೂರು
ತೃತೀಯ ಬಹುಮಾನ: ದಕ್ಷ್ಯ ಆರ್.ಪಿ., ಮಂಗಳೂರು
ಸಮಧಾನಕರ ಬಹುಮಾನ:
1. ಗ್ರಂಥ್ ಕೆ. ಗಟ್ಟಿ, ತೊಕ್ಕೊಟ್ಟು, ಮಂಗಳೂರು
2. ಪಾರ್ಥವಿ ಎಸ್. ಕುಲಾಲ್, ಸಾಣೂರು, ಕಾರ್ಕಳ, ಉಡುಪಿ
3. ಲವಿಶ್ ಎಸ್. ಶೆಟ್ಟಿ, ಹೆಬ್ರಿ, ಉಡುಪಿ
4. ಮೋನಿಷ್ಕಾ ಡಿ. ಅಮೀನ್, ಮಂಗಳೂರು
5. ವಿಹಾನ್ವಿ ಜಿ. ಶೆಟ್ಟಿ, ಕುಂತೂರು, ಮಂಗಳೂರು
ತೀರ್ಪುಗಾರರ ಆಯ್ಕೆ:
1. ಧ್ವನಿ ಮಲ್ಲಯ್ಯ, ಕಾರ್ಕಳ, ಉಡುಪಿ
2. ಹನ್ಶಿತ್ ಪೂಜಾರಿ, ಹೆಜಮಾಡಿ, ಉಡುಪಿ
3. ದೇವನ್ಶ್ ಪೈ, ಕಟಪಾಡಿ, ಉಡುಪಿ
4. ಘನಿಷ್ಕಾ ಎ. ಕೃಷ್ಣ, ರಾಜಪೇಟೆ, ಮಂಡ್ಯ
5. ಕೃಷಿವ್ ಆರ್. ರೈ, ಸುಳ್ಯ, ದಕ್ಷಿಣ ಕನ್ನಡ