ಸುಳ್ಯ, ಸೆ. 08 (DaijiworldNews/TA): ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಜ್ಯೋತಿ ಯುವಕ ಮಂಡಲ (ರಿ.) ಮುಕ್ಕೂರು ಪೆರುವಾಜೆ. ಶ್ರೀ ವೈಷ್ಣವಿ ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸೆ.6ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.



ಪೆರುವೋಡಿ ಶ್ರೀಕ್ಷೇತ್ರದ ಅರ್ಚಕರಾದ ಸುರೇಶ ಉಪಾಧ್ಯಾಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನಾ ಕಾರ್ಯಕ್ರಮ ಹಾಗೂ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಿಹಿಭೋಜನ ನಡೆಯಿತು. ಸಂಜೆ ಹಗ್ಗಜಗ್ಗಾಟ ಸ್ಪರ್ಧೆಯು ನೋಡುಗರ ಮನಸೆಳೆಯುವ ಮೂಲಕ ಯಶಸ್ವಿಯಾಗಿ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತಿ ಯುವಕ ಮಂಡಲದ ಅಧ್ಯಕ್ಷರಾದ ದಿನೇಶ್ ಕಾನಾವು ವಹಿಸಿದ್ದರು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾದ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕರಾದ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ರಘುನಾಥ ಶೆಟ್ಟಿ ಬರೆಮೇಲು, ಜ್ಯೋತಿ ಯುವಕ ಮಂಡಲದ ಕಾರ್ಯದರ್ಶಿ ಧನಂಜಯ ನೀರ್ಕಜೆ,ಶ್ರೀ ವೈಷ್ಣವಿ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಬೀರುಸಾಗು ಹಾಗೂ ಸಾಮಾಜಿಕ ಮುಖಂಡರಾದ ಹೊನ್ನಪ್ಪ ಗೌಡ ಚಾಮುಂಡಿಮೂಲೆ ,ಶ್ರೀ ಕ್ಷೇತ್ರದ ಅರ್ಚಕರು ಸುರೇಶ ಉಪಾಧ್ಯಯ,ನಮ್ಮೂರ ನಮ್ಮ ಕನಸು ಜನ ಸೇವಾ ಟ್ರಸ್ಟ್ ಕೊಡಿಯಾಲ ಇದರ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ ಎಂ ,ಉಪಾಧ್ಯಕ್ಷರು ಅಶ್ವಿನ್ ಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಂಬ್ರ ದಯಾಕರ ಆಳ್ವ ಅವರು ಮಾತಾನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸತ್ಯಪ್ರಸಾದ್ ಕಂಡಿಪ್ಪಾಡಿ ಇವರು ಮಾತನಾಡಿ ಜ್ಯೋತಿ ಯುವಕ ಮಂಡಲದ ಹಿನ್ನೆಲೆಯನ್ನು ತಿಳಿಸಿ ಇನ್ನೂ ಮುಂದಿನ ಯುವಜನತೆ ಕೂಡ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಹುರಿದುಂಬಿಸಿದರು. ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕೊಡಿಯಾಲ ಇದರ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ ಎಮ್ ಇವರು ಮಾತಾನಾಡಿ ಅಷ್ಟಮಿಯ ಮಹತ್ವದ ಬಗ್ಗೆ ತಿಳಿಸಿ ,ನಮ್ಮ ಊರಿನ ಜನರ ಒಗ್ಗಟ್ಟು ಮತ್ತು ಯುವಜನತೆಯ ಕಾರ್ಯವೈಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜ್ಯೋತಿ ಯುವಕ ಮಂಡಲದ ಸದಸ್ಯರಾದ ಶರತ್ ನೀರ್ಕಜೆ ಸ್ವಾಗತಿಸಿ,ದೀಕ್ಷಾ ಪೂವಾಜೆ ಸಹಕರಿಸಿದ ಎಲ್ಲರಿಗೂ ವಂದಿಸಿದರು. ದೀಕ್ಷಾ ನೀರ್ಕಜೆ ಕಾರ್ಯಕ್ರಮವನ್ನು ನಿರೂಪಿಸಿದರು.