ಉಳ್ಳಾಲ, ಸೆ. 07 (DaijiworldNews/TA): ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕುಂಪಲದಲ್ಲಿ ಮೊಸರು ಕುಡಿಕೆ ಉತ್ಸವ ಸಂಭ್ರಮದಿಂದ ನಡೆಯಿತು. ಕುಂಪಲದ ಟೀಮ್ ರಾಪ್ಟರ್ಸ್ (ರಿ) ತಂಡದ ವತಿಯಿಂದ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿಶೇಷವಾಗಿ ರಾಧಾ-ಕೃಷ್ಣರ ವೇಷಧಾರಿಗಳಿಂದ ನಡೆದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಳಿಸಿತು.

ಕೃಷ್ಣನ ಬಾಲಲೀಲೆ ಹಾಗೂ ರಾಧಾ–ಕೃಷ್ಣರ ಪ್ರೇಮಭಾವವನ್ನು ನೃತ್ಯದ ಮೂಲಕ ಸುಂದರವಾಗಿ ಅನಾವರಣಗೊಳಿಸಿದ ಕಲಾವಿದರ ಪ್ರದರ್ಶನಕ್ಕೆ ನೆರೆದಿದ್ದ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅಂತೆಯೇ ಕುಂಪಲದ ಮೊಸರು ಕುಡಿಕೆ ಉತ್ಸವದ ಸಂಭ್ರಮಕ್ಕೆ ಟೀಮ್ ರಾಪ್ಟರ್ಸ್ (ರಿ) ತಂಡದ ಉತ್ಸಾಹಭರಿತ ಭಾಗವಹಿಸುವಿಕೆ ಮತ್ತಷ್ಟು ಕಳೆ ತಂದಿತು. ತಂಡದ ಸದಸ್ಯರು ಹಾಗೂ ಸ್ಥಳೀಯರು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.