ಮಂಗಳೂರು, ಸೆ. 03 (DaijiworldNews/AA): ಸಮುದ್ರದ ಅಲೆಗಳು ಬಲವಾಗಿ ಅಪ್ಪಳಿಸಿದ ಪರಿಣಾಮ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ ಘಟನೆ ಉಳ್ಳಾಲ ಅಳಿವೆ ಸಮೀಪ ಮಂಗಳವಾರ ಸಂಜೆ ಸಂಭವಿಸಿದೆ.

ಶರೀಫ್ ಎಂಬವರಿಗೆ ಸೇರಿದ ಬೋಟ್ನಲ್ಲಿ ಐವರು ಮೀನುಗಾರರು ಮಂಗಳವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದರು. ಬೋಟ್ ಸಮುದ್ರಕ್ಕೆ ಸ್ವಲ್ಪ ದೂರ ಸಾಗುತ್ತಿದ್ದಂತೆ ಬಲವಾದ ಅಲೆಗಳಿಗೆ ಸಿಲುಕಿದ್ದು, ಬಳಿಕ ಮುಳುಗಿದೆ.
ಬೋಟ್ನಲ್ಲಿ ಸಿಲುಕಿದ್ದ ಐವರು ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಬೋಟ್ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಬೋಟ್ ಮುಳುಗಿದ ಪರಿಣಾಮ ಭಾರೀ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಶರೀಫ್ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.