ಪುತ್ತೂರು, ಸೆ. 02 (DaijiworldNews/AK): ಸೆಪ್ಟೆಂಬರ್ 1 ರಂದು ಪುತ್ತೂರು ಪ್ರೆಸ್ ಕ್ಲಬ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜನರ ಗುಂಪೊಂದು ಗಲಾಟೆ ನಡೆಸುತ್ತಿದ್ದ ಆರೋಪದ ಮೇಲೆ ನಗರ ಪೊಲೀಸರು ಮೂವರು ವ್ಯಕ್ತಿಗಳು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಮಧ್ಯಾಹ್ನದ ಸುಮಾರಿಗೆ ಪುತ್ತೂರು ಪ್ರೆಸ್ ಕ್ಲಬ್ ಮುಂದೆ ಜನರ ಗುಂಪೊಂದು ಜಮಾಯಿಸಿ ಗಲಾಟೆ ನಡೆಸುತ್ತಿದೆ ಎಂದು ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ ಅವರಿಗೆ ಬಂದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಕೆಲವು ವ್ಯಕ್ತಿಗಳು ವಾಗ್ವಾದದಲ್ಲಿ ಭಾಗಿಯಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ಜಗಳ ನಿಲ್ಲಿಸುವಂತೆ ಕೇಳಿಕೊಂಡರು ಎಂದು ವರದಿಯಾಗಿದೆ. ಆದರೆ, ಎಚ್ಚರಿಕೆ ನೀಡಿದರೂ ಅವರು ವಾಗ್ವಾದ ಮುಂದುವರೆಸಿದ್ದಾರೆ ಎನ್ನಲಾಗಿದೆ.