ಮಂಗಳೂರು, ಆ. 27 (DaijiworldNews/AK):ಮದರ್ ತೆರೇಸಾ ಫ್ರೆಂಡ್ಸ್ ಅಭಿಮಾನಿ ಬಳಗ (ರಿ) ಫಾದರ್ ಮುಲ್ಲರ್ ರಸ್ತೆ ಕಂಕನಾಡಿ ಇದರ ವತಿಯಿಂದ ಮದರ್ ತೆರೇಸಾ ಅವರ 116 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ, 12 ನೇ ವರ್ಷದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ವಿವಿದ ಪ್ರಶಸ್ತಿ ಪ್ರಧಾನಾ ಕಾರ್ಯಕ್ರಮ ಮಂಗಳೂರಿನ ವೆಲೆನ್ಸಿಯಾ ಪೆರೇರಾ ಸಭಾಂಗಣದಲ್ಲಿ ನೆರವೇರಿತು.


















ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಆಡಳಿತ ಅಧಿಕಾರಿ ಫಾದರ್ ಜಾರ್ಜ್ ಜೀವನ್ ಸಿಕ್ವೇರಾ, ಫಾದರ್ ಮುಲ್ಲರ್ ಚೀಫ್ ನರ್ಸಿಂಗ್ ಸೂಪರಿಡೆಂಟ್ ಸಿಸ್ಟರ್ ನ್ಯಾನ್ಸಿ ಪ್ರಿಯಾ ಮಥಾಯಿಸ್, ನಿವೃತ್ತ ಸೈನಿಕರು ಲಾರೆನ್ಸ್ ಮೊಂತೆರೊ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ, ಮದರ್ ತೆರೇಸಾ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ನಡೆಸಿ ಚಾಲನೆ ನೀಡಿದರು.
ಈ ಸಂದರ್ಭ ಬಳಗದ 12 ನೇ ನೂತನ ಯೋಜನೆಯಾದ ಮದರ್ ತೆರೇಸಾ ಡ್ರೀಮ್ ಹೋಂ ಗೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಬಳಿಕ ರೋಗಿಗಳಿಗೆ ಸಹಾಯ ಧನ ವಿತರಣೆ, ಮದರ್ ತೆರೇಸಾ ಗೌರವ ಪ್ರಶಸ್ತಿ ಪ್ರಧಾನ, ಮದರ್ ತೆರೆಸಾ ಸೇವಾ ಪ್ರಶಸ್ತಿ ಪ್ರಧಾನ, ಮದರ್ ತೆರೇಸಾ ಹ್ಯುಮಾನಿಟಿ ಸ್ಟಾರ್, ಮದರ್ ತೆರೇಸಾ ಸಾರ್ಥಕ ಸರದಾರ ಸೇವಾ ಪ್ರಶಸ್ತಿ ಪ್ರದಾನ, ಹೊಸ ಅನುದಾನಡಾ ಉದ್ಘಾಟನೆ, ಮದರ್ ತೆರೆಸಾ ಅರಳುವ ಹೂವುಗಳು, ಮದರ್ ತೆರೇಸಾ ಅರಳುವ ಪ್ರತಿಭೆಗಳು, ಮದರ್ ತೆರೇಸಾ ಅಕ್ಕರೆಯ ಆಸರೆ ಅನುದಾನ ವಿತರಣಾ ನೆರವೇರಿತು.
ಕಾರ್ಯಕ್ರಮದಲ್ಲಿ ಮದರ್ ತೆರೇಸಾ ಫ್ರೆಂಡ್ಸ್ ಅಭಿಮಾನಿ ಬಳಗದ ಅಧ್ಯಕ್ಷ ಮೈಕಲ್ ಆಂದ್ರಾದೆ, ಉಪಾದ್ಯಕ್ಷರಾದ ಪ್ರಕಾಶ್ ರಾಜ್, ಕಾರ್ಯದರ್ಶಿ ಜೋನ್ ಡಿಸೋಜಾ, ಕೋಶಾಧಿಕಾರಿ ಫ್ರಾನ್ಸಿಸ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಪೆಡ್ರಿಕ್ ಡಿಸೋಜಾ, ಪ್ರಧಾನ ಸಂಚಾಲಕರಾದ ರೊನಾಲ್ಡ್ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.