ದಕ್ಷಿಣ ಕನ್ನಡ, ಆ. 25 (DaijiworldNews/TA): ಪ್ರವಾದಿ ಮುಹಮ್ಮದ್ ಸಯ್ಯದಿ ಅವರ 1501ನೇ ಜನ್ಮದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲಾಗುತ್ತಿದೆ.

ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರ್ಮಿಕ ಚಟುವಟಿಕೆಗಳು ಮತ್ತು ಶಿಸ್ತುಬದ್ಧ ಮೀಲಾದ್ ರ್ಯಾಲಿಗಳು ವೈಭವದಿಂದ ಜರುಗಿದವು. ಪುತ್ತೂರಿನಲ್ಲಿ ಬಂದ್ ವಾತಾವರಣದ ನಡುವೆಯೂ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಸಾರ್ವಜನಿಕ ರ್ಯಾಲಿಗಳು ಶಾಂತಿಯುತವಾಗಿ ಸಾಗಿದವು. ಇತ್ತ ಮಂಗಳೂರಿನ ಬಜಾಲ್ ಹಾಗೂ ಬಂಟ್ವಾಳದ ಪಾಣೆಮಂಗಳೂರು ಗುಡ್ಡೆಅಂಗಡಿ, ಆಲಡ್ಕ ಭಾಗಗಳಲ್ಲಿ ವಿವಿಧ ಮಸೀದಿ ಹಾಗೂ ಮದ್ರಸಾಗಳ ಜಂಟಿ ಆಶ್ರಯದಲ್ಲಿ ಬೃಹತ್ ಸ್ವಲಾತ್ ಮತ್ತು ಮೀಲಾದ್ ರ್ಯಾಲಿಗಳು ನಡೆದವು.
ದಫ್ ಸ್ಕೌಟ್ ಹಾಗೂ ಫ್ಲವರ್ ಶೋ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಧಾರ್ಮಿಕ ಮುಖಂಡರು, ಮಸೀದಿ ಪದಾಧಿಕಾರಿಗಳು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಪ್ರವಾದಿಯವರ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದರು.