ಪುತ್ತೂರು, ,ಆ. 24 (DaijiworldNews/AK): ಈದ್ ಮಿಲಾದ್ ಹಬ್ಬದ ಮುನ್ನ ಸಾರ್ವಜನಿಕ ವಿಶ್ವಾಸ ಹೆಚ್ಚಿಸಲು ಮತ್ತು ನಿವಾಸಿಗಳಲ್ಲಿ ಭದ್ರತೆಯ ಭಾವನೆ ಹೆಚ್ಚಿಸುವ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸರು ಆಗಸ್ಟ್ 24 ರಂದು ಪಥಸಂಚಲನ ನಡೆಸಿದರು.

ಸ್ವಾಭಾವಿಕವಾಗಿ ಈದ್ ಮಿಲಾದ್ ಹಬ್ಬದ ದಿನ, ಹಬ್ಬದ ಪ್ರಯುಕ್ತ ಬಹುತೇಕ ಅಂಗಡಿಗಳು ಮುಚ್ಚಿರುತ್ತದೆ. ಇದರ ಹೊರತಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡುವುದಕ್ಕೆ ಆಸ್ಪದ ನೀಡದಂತೆ ಅಗತ್ಯ ಪೊಲೀಸ್ ಭದ್ರತೆ ಏರ್ಪಡಿಸಿಲಾಗಿದೆ. ಅಂತಹ ಘಟನೆಗಳನ್ನು ತಡೆಗಟ್ಟಲು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ, ಪೊಲೀಸರು ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದರೆ ಪೊಲೀಸರು ಪ್ರಕರಣವನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಈ ಆರೋಪಗಳನ್ನು ತಿರಸ್ಕರಿಸಿದ ಪೊಲೀಸರು, ಇದು "ಸತ್ಯಕ್ಕೆ ದೂರ" ಎಂದು ಹೇಳಿದರು.
ಜಾತಿ, ಧರ್ಮ ಅಥವಾ ರಾಜಕೀಯ ಪ್ರಭಾವವನ್ನು ಪರಿಗಣಿಸದೆ ಹಿಂದಿನ ಹಲವಾರು ಪ್ರಕರಣಗಳಲ್ಲಿ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
"ಈ ವಿಷಯದ ಬಗ್ಗೆ ಯಾರಾದರೂ ಚರ್ಚಿಸಲು ಬಯಸಿದರೆ, ಅವರು ಬಂದು ಮುಕ್ತವಾಗಿ ಚರ್ಚಿಸಬಹುದು" ಎಂದು ಪೊಲೀಸರು ಹೇಳಿದರು, ಪ್ರಕರಣದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ವದಂತಿಗಳನ್ನು ನಂಬಬೇಡಿ ಎಂದು ಜನರನ್ನು ಒತ್ತಾಯಿಸಿದರು.