ಕುಂದಾಪುರ, ಆ. 23 (DaijiworldNews/TA): ತೋಟದ ಕೃಷಿಯನ್ನು ಹಾಳು ಮಾಡಲು ಬಂದ ಕಾಡು ಪ್ರಾಣಿಗಳನ್ನು ಓಡಿಸಲು ಹೋಗುವಾಗ ಕಾಲುಜಾರಿ ಕೆರೆಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆಯು ಆ. 21ರಂದು ಕುಂದಾಪುರದ ಹಾಲಾಡಿ ಗ್ರಾಮದ ಮುದುವೇರಿ ಕೊಡ್ಗಿಮನೆ ಎಂಬಲ್ಲಿ ಸಂಭವಿಸಿದೆ.

ಕೃಷ್ಣ (44) ಮೃತಪಟ್ಟ ಕೃಷಿಕ. ಹಾಲಾಡಿ ಗ್ರಾಮದ ಮುದುವೇರಿ ಕೊಡ್ಗಿಮನೆ ಕೃಷ್ಣ ಅವರು ತಮಗೆ ಸೇರಿದ ಸ್ವಲ್ಪ ಜಾಗದಲ್ಲಿ ಅಡಿಕೆ ಹಾಗೂ ಭತ್ತವನ್ನು ಬೆಳೆದಿದ್ದರು. ಪ್ರತಿನಿತ್ಯ ಎಂಬಂತೆ ವಿವಿಧ ಜಾತಿಯ ಕಾಡುಪ್ರಾಣಿಗಳು ಕೃಷಿಯನ್ನು ಹಾಳು ಮಾಡಲು ದಾಳಿ ಇಡುತ್ತಿದ್ದವು. ಪ್ರತಿನಿತ್ಯವು ಗಮನಕ್ಕೆ ಬಂದಾಗಲೆಲ್ಲ ಅವುಗಳನ್ನು ಓಡಿಸುತ್ತಿದ್ದರು.
ಹಾಗೆಯೇ ಅ.21ರಂದು ಕಾಡುಪ್ರಾಣಿ ಓಡಿಸಲು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪತ್ನಿ ದೇವಕಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.