ಬಂಟ್ವಾಳ, ಜು. 18 (DaijiworldNews/AK): ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹತ್ಯೆಗೀಡಾದ ಲಾವಣ್ಯ ಗೌಡ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕುಟುಂಬವನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಕಠಿಣ ಪರಿಶ್ರಮದ ಮೂಲಕ ಜೀವನ ನಡೆಸುತ್ತಿದ್ದ ಯುವತಿ ಇಂತಹ ಕ್ರೂರ ಮತ್ತು ಅನ್ಯಾಯದ ರೀತಿಯಲ್ಲಿ ಪ್ರಾಣ ಕಳೆದುಕೊಂಡಿರುವುದು ತೀವ್ರ ದುರದೃಷ್ಟಕರ ಎಂದು ಹೇಳಿದರು.
ಇಂತಹ ಘಟನೆಗಳು ಎಂದಿಗೂ ಸಂಭವಿಸಬಾರದು ಎಂದು ಅವರು ಹೇಳಿದರು. ಹಿಂದೆಯೂ ಇದೇ ರೀತಿಯ ಹಲವಾರು ಪ್ರಕರಣಗಳು ನಡೆದಿವೆ ಎಂರು. ಇಂತಹ ಅಪರಾಧಗಳು ಮರುಕಳಿಸದಂತೆ ತಡೆಯುವ ಅಗತ್ಯವನ್ನು ಒತ್ತಿ ಹೇಳಿದ ಅಶೋಕ್ ರೈ, ನಾಗರಿಕರಿಗೆ ಬಲವಾದ ರಕ್ಷಣೆ ನೀಡಲು ಮತ್ತು ಅಂತಹ ಅಪರಾಧಗಳನ್ನು ತಡೆಯಲು ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.