ಉಳ್ಳಾಲ, ಜು. 18 (DaijiworldNews/TA): ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯುವತಿಯರು ಪೊಲೀಸ್ ಠಾಣೆಗೆ ಹೋಗುವ ಧೈರ್ಯವನ್ನೇ ಕಳೆದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜ್ಯದ ಗೃಹ ಖಾತೆಯನ್ನು ಸರಿಯಾಗಿ ನಿಭಾಯಿಸುವ ಅವಶ್ಯಕತೆಯಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಹತ್ಯೆಯಾದ ಲಾವಣ್ಯಳ ಮಹಜರು ನಡೆಯುತ್ತಿದ್ದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ತಿಂಗಳ ಹಿಂದಿನಿಂದ ನೋಡುತ್ತಾ ಬಂದರೆ ಚೂರಿಯನ್ನು ಹಿಡಿದುಕೊಂಡು ಹತ್ಯೆ ಮಾಡಲು ಬರುವುದು , ಹಾಡಹಗಲೇ ಯುವತಿಯ ಕೊಲೆ ನಡೆಯುತ್ತಿದೆ., ರಾಜ್ಯದಲ್ಲಿ ಡಿಕೆಶಿ ಸರಕಾರ ಬಂದ ನಂತರ ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಭೆಗಳನ್ನು ನಡೆಸಿದ ಬಳಿಕವೂ ಕೃತ್ಯಗಳು ಆಗುತ್ತಿವೆ ಎಂದರೆ ಅರ್ಥವಿಲ್ಲದಾಗಿದೆ ಎಂದರು.
ಈ ವೇಳೆ ವಿಹಿಂಪ ಮುಖಂಡ ಪ್ರದೀಪ್ ಸರಿಪಲ್ಲ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ರಾಜ್ ಕೆ.ಆರ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಉಪಸ್ಥಿತರಿದ್ದರು.