ಕಾಸರಗೋಡು, ಜು. 10 (DaijiworldNews/TA): ಮಂಜೇಶ್ವರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿನೂತನ ‘ಹಲಸು ಮೇಳ’ವು ಜುಲೈ 10, 11 ಮತ್ತು 12 ರಂದುಮಂಜೇಶ್ವರದ ಮೆಜೆಸ್ಟಿಕ್ ಮ್ಯಾನರ್ ಕಲಾಸ್ಪರ್ಶಂ ನಲ್ಲಿ ನಡೆಯಲಿದೆ.

ಮೇಳವು ಪ್ರತಿದಿನ ಬೆಳಗ್ಗೆ 10.00 ರಿಂದ ರಾತ್ರಿ 9.30 ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ದೂರದ ಊರುಗಳಿಂದ ಬಂದು ಮಳಿಗೆಗಳನ್ನು ಇಡುವ ಸಣ್ಣ ವ್ಯಾಪಾರಸ್ಥರು, ಕೃಷಿಕರು ಹಾಗೂ ಸ್ಥಳದಲ್ಲೇ ಹಲಸಿನ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುವ ಪಾಕ ತಜ್ಞರನ್ನು ಪ್ರೋತ್ಸಾಹಿಸಿ, ಅವರ ಜೀವನೋಪಾಯಕ್ಕೆ ಆಸರೆಯಾಗುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.