ಕುಂದಾಪುರ, ಜು. 09 (DaijiworldNews/AA): ಎರಡು ದಿನಗಳ ಹಿಂದೆ ಕೊಲ್ಲೂರು ದೇವಾಲಯದಲ್ಲಿ ನಡೆದ 80,000 ರೂಪಾಯಿ ಮೌಲ್ಯದ ಕಳವು ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಲು ಪೊಲೀಸರಿಗೆ ನೆರವಾದ ಇಬ್ಬರು ವ್ಯಕ್ತಿಗಳನ್ನು ಬುಧವಾರ ಪೊಲೀಸ್ ಉಪವಿಭಾಗೀಯ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನಿತರನ್ನು ಕೊಲ್ಲೂರು ನಿವಾಸಿ ಆಟೋ ರಿಕ್ಷಾ ಚಾಲಕ ನವೀನ್ ಪೂಜಾರಿ ದಳಿ ಮತ್ತು ಬೈಂದೂರಿನ ಗಣೇಶ್ ಆಚಾರಿ ಬಂಕೇಶ್ವರ ಎಂದು ಗುರುತಿಸಲಾಗಿದೆ. ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಎಚ್. ಡಿ. ಕುಲಕರ್ಣಿ ಅವರು ಇವರಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕರಾದ ಜಯರಾಮ ಗೌಡ, ಸಂತೋಷ್ ಕಾಯ್ಕಿಣಿ ಮತ್ತು ಶಿವಕುಮಾರ, ಕೊಲ್ಲೂರು ಪೊಲೀಸ್ ಉಪನಿರೀಕ್ಷಕರಾದ ವಿನಯ್ ಕೊರ್ಲಹಳ್ಳಿ ಮತ್ತು ಭೀಮಾಶಂಕರ ಸೇರಿದಂತೆ ಕುಂದಾಪುರ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.