ಸುಳ್ಯ, ಜು. 09 (DaijiworldNews/TA): ಕಾಡಾನೆಗಳ ಹಿಂಡು ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ರಾಷ್ಟೀಯ ಹೆದ್ದಾರಿ 275ನ್ನು ದಾಟಿ ಹೋಗಿ ಕೃಷಿ ನಾಶ ಮಾಡಿದ ಘಟನೆ ನಡೆದಿದೆ.

ರಾತ್ರಿ ಸುಮಾರು 10:45 ಗಂಟೆಗೆ ಏಳು ಆನೆಗಳು ಗುಂಪಿನಲ್ಲಿದ್ದು ಐದು ಆನೆಗಳು ಎಸ್.ಎನ್ ಮಾಸ್ಟರ್ ಅವರ ತೋಟದಲ್ಲಿ ಅಪಾರ ಕೃಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಪುನಹ ಬಂದ ದಾರಿಯಲ್ಲಿ ಸರಕಾರ ಸಾಮ್ಯದ ಸಾಗುವಾನಿ ನೆಡುತೋಪು ಪ್ರವೇಶ ಮಾಡಿವೆ. ಬೆಳಿಗ್ಗೆ 7:00 ಗಂಟೆ ವರೆಗೆ ಘೀಳಿಡುವ ಶಬ್ದ ಕೇಳಿ ಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಳ್ಯ ನಗರ ಬಸ್ ನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ಅಂತರದ ದೂರದಲ್ಲಿ ಕಾಡಾನೆಗಳು ಬಂದು ಕೃಷಿ ನಾಶ ಮಾಡಿರುವುದು ರೈತರ ಆತಂಕವನ್ನು ಹೆಚ್ಚಿಸಿವೆ.