ಮಂಗಳೂರು, ಮೇ. 20 (DaijiworldNews/AK): ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ನಿರ್ದೇಶನದಂತೆ (ಎಐಆರ್ಒ) ದೇಶಾದ್ಯಂತ ಹೊರಡಿಸಿರುವ ಮೆಡಿಕಲ್ ಅಂಗಡಿಗಳ ಬಂದ್ ಕರೆಗೆ ನಗರದಲ್ಲೂ ಅಭೂತಪೂರ್ವ ಸ್ಪಂದನೆ ದೊರೆಕಿದೆ. ನಗರದಾದ್ಯಂತ ಖಾಸಗಿ ಮೆಡಿಕಲ್ ಅಂಗಡಿಗಳು ಬಂದ್ ಆಗಿವೆ.


ಆದರೆ ಮೆಡ್ಪ್ಲಸ್, ಅಪೊಲೊ, ಜನ್ ಔಷಧಿ ಮಳಿಗೆಗಳು ಮತ್ತು ಆಸ್ಪತ್ರೆಗಳಿಗೆ ಹೊಂದಿಕೊಂಡ ಮೆಡಿಕಲ್ ಮಳಿಗೆಗಳು ನಗರದಲ್ಲಿ ಎಂದಿನಂತೆ ತಮ್ಮ ಕಾರ್ಯಾಚರಿಸುತ್ತಿದೆ. ಜಿಲ್ಲೆಯಾದ್ಯಂತ 1,100 ಕ್ಕೂ ಹೆಚ್ಚು ಔಷಧ ಅಂಗಡಿಗಳಿದ್ದು, ಬಂದ್ ಕರೆ ನಂತರ ನಡೆದ ಬಂದ್ ಪ್ರತಿಭಟನೆಯಲ್ಲಿ ಮೆಡಿಕಲ್ ಅಂಗಡಿ ಮಾಲೀಕರು ಭಾಗವಹಿಸಿದ್ದರು.
ಆನ್ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆ್ಯಪ್ಗಳ ಮೂಲಕ ಔಷಧಿಗಳ ಅಕ್ರಮ ಮಾರಾಟದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಆಯೋಜಿಸಲಾಗಿದೆ.