ಬಂಟ್ವಾಳ, ಮೇ. 16 (DaijiworldNews/AK): ದೇವಸ್ಥಾನವೊಂದಕ್ಕೆ ಸಿಡಿಲು ಬಡಿದು ಕೋಟ್ಯಾಂತರ ರೂ ನಷ್ಟ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕಿನ ಮಣಿ ನಾಲ್ಕೂರು ಗ್ರಾಮದ ಇಳಿಯೂರು ಎಂಬಲ್ಲಿ ಇಂದು ಸಂಜೆ ವೇಳೆ ನಡೆದಿದೆ.




ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದು ಬೃಹತ್ ನಷ್ಟ ಸುಮಾರು 1 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಸಂಜೆ ಸುಮಾರು 4.30 ರ ವೇಳೆ ಗೆ ಸುರಿದ ಗಾಳಿ ಮಳೆಯ ನಡುವೆ ಸಿಡಿಲು ಬಡಿದಿದೆ.
ಸಿಡಿಲಿನ ಬಡಿತಕ್ಕೆ ದೇವಸ್ಥಾನದ ಗರ್ಭ ಗುಡಿಯ ಮೇಲಿನ ಪ್ರಾಕಾರ ದ ಶಿಲಾ ಕಲ್ಲುಗಳು ಛಿದ್ರಗೊಂಡು ನೆಲಕ್ಕಪ್ಪಳಿಸಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು.
ಇದೀಗ ದೇವಸ್ಥಾನದ ದೇವರ ಗರ್ಭಗುಡಿಗೆ ಹಾನಿಯಾಗಿದ್ದು,ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ.