ಮಂಗಳೂರು, ಮೇ. 16 (DaijiworldNews/AA): ಬ್ಯಾರಿ ಸಮುದಾಯವು ಮಾಜಿ ಸಿಎಂ ಬಂಗಾರಪ್ಪನವರಿಗೆ ದಕ್ಷಿಣ ಕನ್ನಡದಲ್ಲಿ ರಾಜಕೀಯ ಶಕ್ತಿ ನೀಡಿತ್ತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

















ನಗರದ ಮೊರ್ಗನ್ಗೇಟ್ನಲ್ಲಿ ನಡೆದ ಬ್ಯಾರಿಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, "ಬ್ಯಾರಿ ಸಮುದಾಯವರು ವ್ಯವಹಾರ ಚತುರರು. ಈ ಭಾಗದಲ್ಲಿ ಬಂಗಾರಪ್ಪನವರಿಗೆ ಬ್ಯಾರಿ ಸಮುದಾಯದ ತುಂಬಾ ಅಭಿಮಾನಿಗಳಿದ್ದರು. 1991-92ರಲ್ಲಿ ಬಂಗಾರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ಸಮುದಾಯಕ್ಕೆ ಡೆಂಟೆಲ್ ಕಾಲೇಜು ಕೊಟ್ಟರು. ಅದೇ ಹೊತ್ತಿಗೆ ಯೆನೆಪೋಯ ಸಂಸ್ಥೆಗೂ ಕೊಟ್ಟರು. ಯೆನೆಪೋಯ ಸಂಸ್ಥೆ ಇವತ್ತು ದೊಡ್ಡದಾಗಿ ಬೆಳೆದಿದೆ ಎಂದರು.
ಹರೇಕಳ ಹಾಜಬ್ಬ ಅವರು ಸ್ಕೂಲ್ಗೆ ಸಂಬಂಧಿಸಿ ಯಾವುದೇ ಕೆಲಸ ಕೇಳಿದರೂ ಸರ್ಕಾರ ಅದನ್ನು ಮಂಜೂರು ಮಾಡುತ್ತದೆ ಎಂದರು.
ಸಮಾರಂಭವನ್ನು ಯೆನೆಪೋಯ ಪರಿಗಣಿತ ವಿವಿ ಕುಲಪತಿ ಡಾ.ವೈ ಅಬ್ದುಲ್ಲ ಕುಂಞಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ಅಧ್ಯಕ್ಷ ತುಂಬೆ ಮೊಯ್ದೀನ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ, ಡಾ. ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ವಹಿಸಿದ್ದರು.
ಯೆನೆಪೋಯ ಪರಿಗಣಿತ ವಿವಿ ಕುಲಪತಿ ಡಾ.ವೈ ಅಬ್ದುಲ್ಲ ಕುಂಞಿ ಅವರಿಗೆ ಇದೇ ಸಂದರ್ಭದಲ್ಲಿ 'ಬ್ಯಾರಿ ಲೆಜೆಂಡ್ ಅವಾರ್ಡ್' ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಅಬ್ದುಲ್ಲ ಸತ್ತಾರ್, ಡಾ. ಮುಹಮ್ಮದ್ ಇಸ್ಮಾಯಿಲ್, ಎಸ್.ಎಂ.ಅರ್ಶದ್ ಮೋತಿಶ್ಯಾಂ, ಮಾಜಿ ಶಾಸಕ ಮೊಯ್ದೀನ್ ಬಾವ, ಡಾ. ಹರೇಕಳ ಹಾಜಬ್ಬ, ಬಿಸಿಸಿಐ ಅಂತರ್ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ಹಿದಾಯತ್ ಅಡ್ಡೂರು, ಅಬ್ದುಲ್ಲ ಮೋನು, ಕಾರ್ಯದರ್ಶಿಗಳಾದ ನಿಸಾರ್ ಮುಹಮ್ಮದ್ ಫಕೀರ್, ಕಾರ್ಯಕಾರಿ ಸಮಿತಿ ಸದಸ್ಯರಾದ, ಡಾ.ಯು.ಟಿ. ಇಫ್ತಿಕಾರ್ ಅಲಿ, ರಿಯಾಝ್ ಎ.ಕೆ. ಬಾವ, ಶೌಕತ್ ಶೌರಿ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮುಹಮ್ಮದ್ ಹಾರಿಸ್, ಜಿ.ಅಬ್ದುಲ್ ರಝಾಕ್, ಆಸಿಫ್ ಸೂಫಿ ಖಾನ್, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಬದ್ರುದ್ದೀನ್ ಪಣಂಬೂರು ಉಪಸ್ಥಿತರಿದ್ದರು.
'ಬಾನ್ಯ' ಮಾಹಿತಿ ಪತ್ರ ಮತ್ತು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಮನ್ಸೂರ್ ಅಹ್ಮದ್ ವಂದಿಸಿ, ಶಾಹಿಲ್ ಝಹಿರ್ ಕಾರ್ಯಕ್ರಮ ನಿರೂಪಿಸಿದರು.