ಬಂಟ್ವಾಳ, ಮೇ. 15 (DaijiworldNews/TA): 2026-2027 ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ವಾಳ ತಾಲೂಕು ಶಿಕ್ಷಣಾಧಿಕಾರಿ ಮಾಲತಿ ಹೇಳಿದರು. ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಲಯದಲ್ಲಿ ಬ್ಲಾಕ್ ಮಟ್ಟ, ಹೋಬಳಿ ಮಟ್ಟ ಹಾಗೂ ಕ್ಲಸ್ಟರ್ ಮಟ್ಟ ಎಂಬ ಮೂರು ವಿಭಾಗದಲ್ಲಿ ದಾಖಲಾತಿಯನ್ನು ಕೈಗೊಂಡಿದ್ದು, ಮೇ15 ರಂದು ಬ್ಲಾಕ್ ಮಟ್ಟದ, ಮೇ. 18 ರಂದು ಹೋಬಳಿ ಮಟ್ಟ ಹಾಗೂ ಮೇ. 20 ರಂದು ಕ್ಲಸ್ಟರ್ ಮಟ್ಟದಲ್ಲಿ ದಾಖಲಾತಿ ಅಭಿಯಾನ ನಡೆಯಲಿದೆ.
ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಉದ್ದೇಶದಿಂದ " ದಾಖಲಾತಿ ಅಂದೋಲನ 2026-27" ಎಂಬ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದ್ದು, ತಾಲೂಕಿನ ಜನತೆಯ ಸಹಕಾರ ಬೇಕು ಎಂದು ತಿಳಿಸಿದರು. ಇದೇ ವೇಳೆ ತಾ.ಪಂ. ಇ.ಒ. ಸಚಿನ್ ಕುಮಾರ್ ಮಾತನಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮ ಬಿ. ಬಿ.ಆರ್.ಸಿ. ಸಮನ್ವಯಧಿಕಾರಿ ವಿದ್ಯಾ ಉಪಸ್ಥಿತರಿದ್ದರು.