ಮಂಗಳೂರು,ಮೇ. 12 (DaijiworldNews/AK): ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ವತಿಯಿಂದ ಮೇ 9 ಮತ್ತು 10 ರಂದು ಪ್ರತಿಷ್ಠಿತ ಎರಡು ದಿನಗಳ ಲೈವ್ TAVI ಕಾರ್ಯಾಗಾರ ಯಶಸ್ವಿಯಾಗಿ ಆಯೋಜಿಸಲಾಯಿತು.
![]()
ಈ ಕಾರ್ಯಾಗಾರದಲ್ಲಿ Transcatheter Aortic Valve Implantation (TAVI/TAVR) ಎಂಬ ಅತ್ಯಾಧುನಿಕ, minimally invasive ಕಾರ್ಯವಿಧಾನದ ಮೂಲಕ ಹೃದಯದ ವಾಲ್ವ್ ಬದಲಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಾಗಾರವನ್ನು ಖ್ಯಾತ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಹಾಗೂ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಯೂಸುಫ್ ಕುಂಬ್ಳೆ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅವರು ಕಾರ್ಯಕ್ರಮದ ಕೋರ್ಸ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದರು.
ಕಾರ್ಯಾಗಾರದ ಸಂದರ್ಭದಲ್ಲಿ ಡಾ. ಯೂ ಸುಫ್ ಕುಂಬ್ಳೆ ಅವರು ಅತ್ಯಂತ ಸಂಕೀರ್ಣ ಮತ್ತು ಹೆಚ್ಚಿನ ಅಪಾಯದ TAVI ಪ್ರಕ್ರಿಯೆಗಳನ್ನು ನೇರ ಪ್ರದರ್ಶನದ ಮೂಲಕ ನೆರವೇರಿಸಿದರು. ಇದರಲ್ಲಿ bicuspid aortic valve, ತೀವ್ರವಾಗಿ ಕ್ಯಾಲ್ಸಿಫೈಗೊಂಡ ವಾಲ್ವ್ಗಳು, ಸಂಕೀರ್ಣ ಅನಾಟಮಿ ಹಾಗೂ ವಾಲ್ವ್ -ಇನ್-ವಾಲ್ವ್ ರೀತಿಯ ಪ್ರಕ್ರಿಯೆಗಳು ಸೇರಿದ್ದವು. ಎರಡು ದಿನಗಳ ಅವಧಿಯಲ್ಲಿ ಭಾಗವಹಿಸಿದ ವೈದ್ಯರಿಗೆ ನೇರ ಪ್ರಕ್ರಿಯೆಗಳ ಮೂಲಕ ಉನ್ನತ ಮಟ್ಟದ TAVI ತಂತ್ರಜ್ಞಾನಗಳ ಕುರಿತು ಸಮಗ್ರ ಅರಿವು ನೀಡಲಾಯಿತು.
ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಿಂದ ಅನೇಕ ಕಾರ್ಡಿಯಾಲಜಿಸ್ಟ್ಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಇದು ಈ ಪ್ರದೇಶದಲ್ಲಿ ನಡೆದ ಅತ್ಯಂತ ಮಹತ್ವದ ಶೈಕ್ಷಣಿಕ ಹೃದಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಈ ಲೈವ್ ಕಾರ್ಯಾಗಾರಕ್ಕೆ ಡಾ. ಸಂಧ್ಯಾ ರಾಣಿ ಪಿ ನ್, ಡಾ. ಕಾರ್ತಿಕೇಯನ್ ಟಿ, ಡಾ. ಆಕಾಶ್ ನಾಯರ್, ಬೆಂಬಲ ನೀಡಿದರು. ಹಾಗೆಯೇ ಡಾ. ಕೆ ಸುಬ್ರಮಣ್ಯಮ್ ಮತ್ತು ಡಾ. ಸಯೀದ್ ಮೊಹಮ್ಮದ್ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಕೋರ್ಸ್ ಚಟುವಟಿಕೆಗಳನ್ನು ಸಂಯೋಜಿಸಿದರು.
ಲೈವ್ ಪ್ರಕ್ರಿಯೆಗಳ ಜೊತೆಗೆ, ಹೃದಯ ಚಿಕಿತ್ಸೆಯ ಸಮಕಾಲೀನ ವಿಷಯಗಳ ಕುರಿತು Continuing Medical Education (CME) ಆಯೋಜಿಸಲಾಯಿತು.
Structural heart disease interventions, valve therapies ಹಾಗೂ ಆಧುನಿಕ ಕಾರ್ಡಿಯಾಲಜಿ ಚಿಕಿತ್ಸೆಗಳ ಕುರಿತು ತಜ್ಞರು ವೈಜ್ಞಾನಿಕ ಉಪನ್ಯಾಸಗಳು ಮತ್ತು ಸಂವಾದಾತ್ಮಕ ಚರ್ಚೆಗಳನ್ನು ನಡೆಸಿದರು.
ಕಾರ್ಯಾಗಾರದ ಅಂಗವಾಗಿ ವಿಶೇಷ ಡಿನ್ನರ್ ಮೀಟ್ ಮತ್ತು TAVI ಸಿಂಪೋಸಿಯಂ ಕೂಡ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಹಿರಿಯ ಕಾರ್ಡಿಯಾಲಜಿಸ್ಟ್ ಡಾ. ಆರ್ ಎಲ್ ಕಾಮತ್ ಅವರು ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಕರ್ನಾಟಕದಲ್ಲಿ ಅತ್ಯಾಧುನಿಕ ಹೃದಯ ತಂತ್ರಜ್ಞಾನ ಮತ್ತು ಉನ್ನತ ಮಟ್ಟದ ಹೃದಯ ಚಿಕಿತ್ಸೆಯ ಕೇಂದ್ರವಾಗಿ ಬೆಳೆದಿದೆ ಎಂದು ಪ್ರಶಂಸಿಸಿದರು.
ಹಿಂದೆ ಓಪನ್ ಹಾರ್ಟ್ ಸರ್ಜರಿಗಾಗಿ ರೋಗಿಗಳನ್ನು ಬೇರೆ ಕೇಂದ್ರಗಳಿಗೆ ರೆಫರ್ ಮಾಡಲಾಗುತ್ತಿತ್ತು. ಆದರೆ ಈಗ ಅನೇಕ ರೋಗಿಗಳು ಶಸ್ತ್ರಚಿಕಿತ್ಸೆಯ ಬದಲು ಅತ್ಯಾಧುನಿಕ ಇಂಟರ್ವೆನ್ಶನಲ್ ಹೃದಯ ಚಿಕಿತ್ಸೆಯನ್ನು ಪಡೆಯಲು ಇಂಡಿಯಾನಾ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. ಡಾ. ಯೂಸುಫ್ ಕುಂಬ್ಳೆ ಅವರ ನೇತೃತ್ವದ ವೈದ್ಯರ ತಂಡದ ಸಮರ್ಪಿತ ಸೇವೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಡಾ. ಯೂಸುಫ್ ಕುಂಬ್ಳೆ ಮತ್ತು ಅವರ ತಂಡದ ನಾಯಕತ್ವದ ಮೂಲಕ ಮಂಗಳೂರಿಗೆ ತಂದ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಿಂದ ರೋಗಿಗಳು ಸುಧಾರಿತ ರಚನಾತ್ಮಕ ಹೃದಯ ಚಿಕಿತ್ಸೆಗಳಿಗಾಗಿ ಇಂಡಿಯಾನಾ ಆಸ್ಪತ್ರೆಗೆ ಹೆಚ್ಚಾಗಿ ರೆಫರ್ ಆಗುತ್ತಿದ್ದಾರೆ ಎಂದು ಹೇಳಿದರು.
ಇದು ಕರಾವಳಿ ಕರ್ನಾಟಕ ಮತ್ತು ಉತ್ತರ ಮಲಬಾರ್ ಪ್ರದೇಶದಲ್ಲಿ ನಡೆದ ಮೊದಲ ಉನ್ನತ ಮಟ್ಟದ ಲೈವ್ TAVI ಕಾರ್ಯಾಗಾರವೆಂದು ಪರಿಗಣಿಸಲಾಗಿದೆ. ಈ ಮೂಲಕ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಮತ್ತೊಮ್ಮೆ ವಿಶ್ವಮಟ್ಟದ ಹೃದಯ ಚಿಕಿತ್ಸೆಯನ್ನು ಒದಗಿಸುವ ಮತ್ತು ಯುವ ಹೃದ್ರೋಗ ತಜ್ಞರಿಗೆ ತರಬೇತಿ ನೀಡುವ ತನ್ನ ಬದ್ಧತೆಯನ್ನು ಸಾಬೀತುಪಡಿಸಿದೆ.
ಡಾ. ಯೂಸುಫ್ ಕುಂಬ್ಳೆ ಅವರ ನೇತೃತ್ವದಲ್ಲಿ, ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಮಂಗಳೂರು, ಮುಂದುವರಿದ ರಚನಾತ್ಮಕ ಹೃದಯ ಮಧ್ಯಸ್ಥಿಕೆಗಳು (structural heart interventions) ಮತ್ತು ಹೃದಯ ವೈದ್ಯಕೀಯ ಶಿಕ್ಷಣದಲ್ಲಿ ಪ್ರಮುಖ ಅಂತರರಾಷ್ಟ್ರೀಯ ಹೃದಯ ಕೇಂದ್ರಗಳಿಗೆ ಸಮಾನವಾಗಿ ಬೆಳೆಯುತ್ತಿದೆ.