ಉಪ್ಪಿನಂಗಡಿ, ಮೇ. 10 (DaijiworldNews/TA): ರಸ್ತೆ ಕಾಮಗಾರಿಯ ಸಂದರ್ಭ ರೋಡ್ ರೋಲರ್ನ ಅಡಿಗೆ ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಮೇ 9ರಂದು ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ.

ಇಲ್ಲಿ ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ವ್ಯಕ್ತಿಯೋರ್ವ ರಸ್ತೆ ಬದಿ ಮಲಗಿದ್ದ ಎನ್ನಲಾಗಿದೆ. ಆತನ ಮೇಲೆ ರೋಡ್ ರೋಲರ್ ಚಲಿಸಿದ್ದು, ಸ್ಥಳದಲ್ಲೇ ಈತ ಸಾವನ್ನಪ್ಪಿದ್ದಾನೆ. ಮೃತಪಟ್ಟ ವ್ಯಕ್ತಿ ಉತ್ತರ ಭಾರತ ಮೂಲಕ ಕಾರ್ಮಿಕ ಎನ್ನಲಾಗಿದೆ.