ಉಪ್ಪಿನಂಗಡಿ, ಮೇ. 09 (DaijiworldNews/AA): ರಸ್ತೆ ಕಾಮಗಾರಿಯ ವೇಳೆ ರೋಡ್ ರೋಲರ್ನ ಅಡಿಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶನಿವಾರ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಸಂಭವಿಸಿದೆ.

ಇಲ್ಲಿ ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ವ್ಯಕ್ತಿಯೋರ್ವ ರಸ್ತೆ ಬದಿ ಮಲಗಿದ್ದ ಎನ್ನಲಾಗಿದೆ. ಆತನ ಮೇಲೆ ರೋಡ್ ರೋಲರ್ ಚಲಿಸಿದ್ದು, ಸ್ಥಳದಲ್ಲೇ ಈತ ಮೃತಪಟ್ಟಿದ್ದಾನೆ.
ರೋಡ್ ರೋಲರ್ ಚಲಿಸಿದ ಪರಿಣಾಮ ವ್ಯಕ್ತಿಯ ದೇಹ ಅಪ್ಪಚ್ಚಿಯಾಗಿದೆ. ಈತ ಉತ್ತರ ಭಾರತ ಮೂಲಕ ಕಾರ್ಮಿಕ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.