ಮಂಗಳೂರು,ಮೇ. 09 (DaijiworldNews/AK):ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ.ರಿ ಇದರ ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘ.ನಿ ಮಂಗಳೂರು ಇದರ ದಶಮಾನೋತ್ಸವ ಸಮಾರಂಭ ಸಂಭ್ರಮವು ಮೇ 10 ರಂದು ರವಿವಾರ ನಗರದ ಪುರಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭವು ಜಿಲ್ಲಾಧ್ಯಕ್ಷ ಸಂಜೀವ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಸಭಾಧ್ಯಕ್ಷರು ಯು ಟಿ ಖಾದರ್ ಜಿಲ್ಲಾ ಉಸ್ತುವಾರಿ ಸಚಿವರು, ದಿನೇಶ್ ಆರ್ ಗುಂಡೂರಾವ್ , ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ.
ಆಶೀರ್ವಚನ ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕರು ಶ್ರೀಹರಿ ನಾರಾಯಣದಾಸ್ ಅಸ್ರಣ್ಣ , ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಖ್ಯ ಅತಿಥಿಗಳಾಗಿ ಶಾಸಕರು ಡಿ ವೇದವ್ಯಾಸ ಕಾಮತ್ , ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಭಾಗೀರಥಿ ಮುರುಳ್ಯ , ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರು ಡಾ ವೈ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರು , ಶಾಸಕರು ಐವನ್ ಡಿ'ಸೋಜಾ, ಸರ್ಕಾರಿ ಲೇಡಿ ಗೋಷನ್ ಆಸ್ಪತ್ರೆ ಯ ವೈದ್ಯಕೀಯ ಅಧೀಕ್ಷಕರು ಡಾ ದುರ್ಗಾ ಪ್ರಸಾದ್ ಎಂ ಆರ್, ವೆನ್ ಲಾಕ್ ಸರ್ಕಾರಿ ಆಸ್ಪತ್ರೆಯ ಮೂತ್ರ ರೋಗ ತಜ್ಞರು ಡಾ ಸದಾನಂದ ಪೂಜಾರಿ, ಕೊಡಗು ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರು ಹೆಚ್ ಎಂ ಸೋಮಪ್ಪ, ದ.ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ರಾಜೇಶ್ ಜಿ , ಮಂಗಳೂರು ಅಖಿಲ ಭಾರತ ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರು ಡಾ ರಾಜೇಶ್ ಆಳ್ವ, ದ.ಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ನವೀನ್ ಕುಮಾರ್ ,ಮಂಗಳೂರು ಚೈತನ್ಯ ಸಹಕಾರಿ ಸಂಘದ ಅಧ್ಯಕ್ಷರು ರಘುನಾಥ ಅತ್ತಾವರ , ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರು ಶಂಕರ್ ಬಿ ಹಾಸನ, ಇವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಯಲಿದೆ. ಸಮುದಾಯದ ಹಾಗೂ ಹವ್ಯಾಸಿ ತಂಡದವರಿಂದ ಸುಗಮ ಸಂಗೀತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ