ಮಂಗಳೂರು, ಮೇ. 09 (DaijiworldNews/AA): ನಗರದ ಪ್ರಸಿದ್ಧ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯಾದ ವಿಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ವತಿಯಿಂದ ಸಮ್ಮರ್ ಸೇಲ್ ನಡೆಯುತ್ತಿದ್ದು, ಮನೆ ಹಾಗೂ ಕಚೇರಿ ಬಳಕೆಯ ಫರ್ನಿಚರ್, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ.








ಈ ಸೇಲ್ನಲ್ಲಿ ಸೋಫಾ ಸೆಟ್ಸ್, ಡೈನಿಂಗ್ ಟೇಬಲ್ಸ್, ಬೆಡ್ರೂಮ್ ಸೆಟ್ಸ್, ವಾಡ್ರೋಬ್ಸ್, ಟಿವಿ ಯುನಿಟ್ಸ್, ಸೇರಿದಂತೆ ವಿವಿಧ ಫರ್ನಿಚರ್ ಮಾದರಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಅದೇ ರೀತಿ ಟಿವಿ, ಫ್ರಿಜ್, ವಾಶಿಂಗ್ ಮೆಷಿನ್, ಏರ್ ಕಂಡೀಷನರ್, ಇನ್ವರ್ಟರ್, ಚಿಮ್ನಿ, ಕುಕ್ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೂ ವಿಶೇಷ ಆಫರ್ ನೀಡಲಾಗುತ್ತಿದೆ.
ಗ್ರಾಹಕರ ಅನುಕೂಲಕ್ಕಾಗಿ ಇಎಮ್ಐ ಸೌಲಭ್ಯ ಹಾಗೂ 100% ಫೈನಾನ್ಸ್ ವ್ಯವಸ್ಥೆಯೂ ಕಲ್ಪಿಸಲಾಗಿದೆ. 1.5 ಲಕ್ಷ ರೂ. ಮೌಲ್ಯದ ಫರ್ನಿಚರ್ ಖರೀದಿಸಿದವರಿಗೆ ಉಚಿತ ರಿಕ್ಲೈನರ್ ನೀಡುವ ವಿಶೇಷ ಆಫರ್ ಕೂಡ ಗ್ರಾಹಕರ ಗಮನ ಸೆಳೆಯುತ್ತಿದೆ.
ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮೇಲೆ ಭರ್ಜರಿ ಆಫರ್ - ಗ್ರಾಹಕರಿಗೆ ವಿಶೇಷ ರಿಯಾಯಿತಿ
ಸಮ್ಮರ್ ಸೇಲ್ನಲ್ಲಿ ವಿವಿಧ ಮಾದರಿಯ ಸೋಫಾ ಸೆಟ್ಸ್ 26,999 ರೂ. ರಿಂದ ಆರಂಭವಾಗುತ್ತಿದ್ದು, ಪ್ರೀಮಿಯಂ ಮಾದರಿಗಳು 88,999 ರೂ. ವರೆಗೆ ಲಭ್ಯವಿವೆ. ಡೈನಿಂಗ್ ಟೇಬಲ್ ಸೆಟ್ಸ್ 22,999 ರೂ. ರಿಂದ 35,999 ರೂ. ದರದಲ್ಲಿ ದೊರೆಯುತ್ತಿವೆ. ಕಾಟ್ 13,999 ರೂ.ರಿಂದ ಆರಂಭವಾಗುತ್ತಿದ್ದು, ಬೆಡ್ರೂಮ್ ಸೆಟ್ಸ್ 83,999 ರೂ. ರಿಂದ 1,10,999 ರೂ. ವರೆಗೆ ಮಾರಾಟವಾಗುತ್ತಿವೆ.
ವಾಡ್ರೋಬ್ಸ್ 10,999 ರೂ. ರಿಂದ ಲಭ್ಯವಿದ್ದು, ಮೆಟಲ್ ವಾಡ್ರೋಬ್ಸ್ ವಿಶೇಷ ಆಫರ್ ದರ 36,999 ರೂ. ಆಗಿದೆ. ಟಿವಿ ಯುನಿಟ್ಸ್ 16,999 ರೂ. ರಿಂದ 21,999 ರೂ. ದರದಲ್ಲಿ ದೊರೆಯುತ್ತಿವೆ. ದೀವಾನ್ 4,999 ರೂ., ಟೀಪಾಯ್ 2,599 ರೂ., ಡ್ರೆಸ್ಸಿಂಗ್ ಟೇಬಲ್ 6,999 ರೂ., ಬುಕ್ ಶೆಲ್ಫ್ 11,999 ರೂ. ಹಾಗೂ ರಾಕಿಂಗ್ ಚೇರ್ 8,999 ರೂ. ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 32 ಇಂಚಿನ ಸ್ಮಾರ್ಟ್ ಟಿವಿ 10,999 ರೂ., 43 ಇಂಚಿನ ಸ್ಮಾರ್ಟ್ ಟಿವಿ 16,999 ರೂ. ಹಾಗೂ 55 ಇಂಚಿನ 4ಕೆ ಯುಎಚ್ಡಿ ಟಿವಿ 34,999 ರೂ. ದರದಲ್ಲಿ ದೊರೆಯುತ್ತಿದೆ. ವಾಶಿಂಗ್ ಮೆಷಿನ್ಸ್ 9,999 ರೂ. ರಿಂದ ಆರಂಭವಾಗುತ್ತಿವೆ. ಸಿಂಗಲ್ ಡೋರ್ ಫ್ರಿಜ್ 16,999 ರೂ. ಮತ್ತು ಡಬಲ್ ಡೋರ್ ಫ್ರಿಜ್ 24,999 ರೂ. ದರದಲ್ಲಿ ಲಭ್ಯವಿದೆ. 1 ಟನ್ ಎಸಿ 27,999 ರೂ. ಹಾಗೂ 1.5 ಟನ್ ಎಸಿ 30,999 ರೂ. ದರದಲ್ಲಿ ಮಾರಾಟವಾಗುತ್ತಿದೆ.
ಈ ಸಮ್ಮರ್ ಸೇಲ್ ಯೆಯ್ಯಾಡಿ, ತೊಕೊಟ್ಟು, ವಾಮಂಜೂರು ಮತ್ತು ಲೇಡಿಹಿಲ್ ಶಾಖೆಗಳಲ್ಲಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡಿ ಖರೀದಿ ಮಾಡುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ಮನೆ ಅಲಂಕರಿಸಲು ಹಾಗೂ ಹೊಸ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇದು ಸುವರ್ಣಾವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.