ಮಂಗಳೂರು, ಮೇ. 07 (DaijiworldNews/AK): ಮಂಗಳ ಅಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್ನಲ್ಲಿ ಹೊಸದಾಗಿ ವಾಕ್ ಮತ್ತು ಶ್ರವಣ ವಿಭಾಗವನ್ನು ಉದ್ಘಾಟಿಸಲಾಯಿತು.

ಮಂಗಳ ಅಸ್ಪತ್ರೆಯ ಸ್ಥಾಪಕ ಹಾಗೂ ವೈದಕೀಯ ನಿದೇರ್ಶಕ ಡಾ. ಗಣಪತಿ ಪಿ. ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಯೋಜನೆ ಮಂಗಳೂರು ಸುತ್ತಮುತ್ತಲಿನ ಭಾಗಕ್ಕೆ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ವಿಶೇಷವಾಗಿ ವಾಕ್ ಮತ್ತು ಶ್ರವಣ ದೋಷಗಳಿಗೆ ಪ್ರತ್ಯೇಕವಾಗಿ ಮತ್ತು ಅತ್ಯಂತ ಸಮಕಾಲೀನ ಸೌಲಭ್ಯಗಳನ್ನು ಹೊಂದಿಸಿಕೊಂಡು ಈ ಪ್ರಯತ್ನ ಮಾಡಲಾಗಿದೆ ಎಂದರು.
ವಿಶೇಷ ಆರೋಗ್ಯ ಸೇವೆ ಹೆಚ್ಚಿಸುವ ಹೆಜ್ಜೆಯಾಗಿ ಮಂಗಳ ಆಸ್ಪತ್ರೆ ತನ್ನ ಹೊಸ ವಾಕ್ ಮತ್ತು ಶ್ರವಣ ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಿದೆ. ಇದು ವಾಕ್ ಮತ್ತು ಶ್ರವಣ ದೋಷ ಹೊಂದಿರುವ ವ್ಯಕ್ತಿಗಳಿಗೆ ರೋಗ ನಿರ್ಣಯ ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ ಎಂದರು.
ಹೊಸದಾಗಿ ತೆರೆಯಲಾದ ವಿಭಾಗವು ಅಧುನಿಕ ಆಡಿಯಾಲಜಿ ಮತ್ತು ಸ್ವೀಚ್ ಥೆರಪಿ ಸೌಲಭ್ಯಗಳನ್ನು ಹೊಂದಿದ್ದು ಇಂತಹ ತೊಂದರೆಗಳನ್ನು ಅರಂಭಿಕ ಹಂತದಲ್ಲೇ ಪತ್ತೆಹಚ್ಚಿ ಪರಿಣಾಮಕಾರಿ ನಿರ್ವಹಣೆ ನಡೆಸುತ್ತದೆ. ವೈದ್ಯಕೀಯ ಸೇವೆಯಲ್ಲಿ ತಮ್ಮ ಬದ್ದತೆಯ ಪರವಾಗಿ ಇಂತಹ ಅಧುನಿಕ ಸೇವೆಯಲ್ಲಿ ತಮ್ಮ ಬದ್ಧತೆಯ ಪರವಾಗಿ ಇಂತಹ ಅಧುನಿಕ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ಸಂಸ್ಥೆ ತೀರ್ಮಾನಿಸಿದೆ ಎಂದರು.
ಮುಖ್ಯ ಅತಿಥಿ ಮಂಗಳ ಕಿಡ್ನಿ ಫೌಂಡೇನ್ನ ನಿದೇರ್ಶಕ ಡಾ. ಮೊಹಿದಿನ್ ನಫಸೀರ್ ಮಾತನಾಡಿ, ಇಂತಹ ಸಂಸ್ಥೆಗಳಿಂದ ಮಕ್ಕಳು, ವೃದ್ದರು ಶ್ರವಣ ಮತ್ತು ಮಾತನಾಡುವ ಸಮಯದಲ್ಲಿ ತೊಂದರೆ ಹೊಂದಿರುವವರು ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ತರಬೇತಿ ಪಡೆದ ವೈದ್ಯ ತಜ್ಞರು, ಆಡಿಯಾಲಜಿಸ್ಟ್ಗಳು ಮತ್ತು ವಾಕ್(ಭಾಷಾ) ರೋಗ ಶಾಸ್ತ್ರಜ್ಞರು ಈ ಘಟಕವನ್ನು ಮುನ್ನಡೆಸಲಿದ್ದಾರೆ. ವಾಕ್ ಮತ್ತು ಶ್ರವಣ ವಿಭಾಗದ ಮುಖಸ್ಥರಾದ ರಾಯನ್ಸ್ ಹಾಗೂ ತಜ್ಞರಾದ ಕಾವ್ಯ ಶೆಟ್ಟಿ , ಅರ್ಪಿತಾ ಸೂರ್ಯನಾರಾಯಣ ಅವರು ವಿಭಾಗದ ಕಾರ್ಯ ವಿಧಾನಗಳ ಪರಿಚಯ ಮಾಡಿದರು. ನಿರ್ದೇಶಕಿ ಡಾ, ಅನಿತಾ ಜಿ. ಭಟ್ ಸ್ವಾಗತಿಸಿ, ಅವಿನಾಶ್ ಎಂ.ಎ ವಂದಿಸಿದರು.
ಈ ಸಂಸ್ಥೆ ಶ್ರವಣ ದೋಷಗಳ ಮೌಲ್ಯ ಮಾಪನ, ವಾಕ್(ಭಾಷಾ) ಚಿಕಿತ್ಸೆ ಶ್ರವಣ ಸಾಧನಗಳ ಸಮಾಲೋಚನೆ ಅಲ್ಲದೆ ರೋಗಿಗಳ ವೈಯಕ್ತಿಕ ಚಿಕಿತ್ಸಾ ಅಗತ್ಯಗಳಿಗೆ ಅನುಗುಣವಾದ ಪುನರ್ವಸತಿ ಕಾರ್ಯಕ್ರಮಗಳನ್ನು ಒಳಗೊಂಡಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಅಸ್ಪತ್ರೆ ಪ್ರಕಟನೆಯಲ್ಲಿ ತಿಳಿಸಿದೆ.