ಮಂಗಳೂರು, ಮೇ. 06 (DaijiworldNews/AK): ವಿನೂತನವಾಗಿ ಸಂಜೀವಿನಿ ಒಕ್ಕೂಟದ ಮೂಲಕ ಖರೀದಿಸಲಾದ ತ್ಯಾಜ್ಯ ವಿಲೇವಾರಿ ವಾಹನವನ್ನು ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು ವಾಹನವನ್ನ ಚಲಾಯಿಸುವ ಮೂಲಕ ಚಾಲನೆ ನೀಡಿ ಬಳಿಕ ಕೀಯನ್ನು ವಾಹನ ಚಾಲಕರಿಗೆ ಹಸ್ತಾಂತರಿಸಿದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಬೂಬಕರ್ ಅವರು ಮಾತನಾಡಿ, ನೀರುಮಾರ್ಗ ಗ್ರಾಮ ಪಂಚಾಯತ್ ನಲ್ಲಿ ಘನ ತ್ಯಾಜ್ಯ ಘಟಕವನ್ನು ನಿರ್ವಹಿಸುತ್ತಿರುವ ಸಂಜೀವಿನಿ ಒಕ್ಕೂಟದ ಮೂಲಕ ತ್ಯಾಜ್ಯ ವಿಲೇವಾರಿ ವಾಹನವನ್ನು ಖರೀದಿಸಲಾಗಿದ್ದು, ವ್ಯವಸ್ಥಿತ ತ್ಯಾಜ್ಯ ವಿಲೇವಾರಿಗಾಗಿ ನೀರುಮಾರ್ಗ ನಾಗರೀಕರು ಹೆಚ್ಚಿನ ಸಹಕಾರ ನೀಡ ಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷರು ಶ್ರೀಧರ್, ಕಾರ್ಯದರ್ಶಿ ಶಾಲಿನಿ, ಒಕ್ಕೂಟದ ಅಧ್ಯಕ್ಷರಾದ ಪ್ರಮೀಳ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.