ಬಂಟ್ವಾಳ, ಮೇ. 06 (DaijiworldNews/TA): ಎರಡು ಲಾರಿಗಳು ಪರಸ್ಪರ ಓವರ್ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ದುರ್ಘಟನೆ ಪರಂಗಿಪೇಟೆಯಲ್ಲಿ ನಡೆದಿದೆ. ಮೃತರನ್ನು ಪರಂಗಿಪೇಟೆ ನಿವಾಸಿ ಸಲಾಹುದ್ದಿನ್ (60) ಎಂದು ಗುರುತಿಸಲಾಗಿದೆ.

ಪರಂಗಿಪೇಟೆ ಸೇವಾಂಜಲಿ ಎದುರು ರಸ್ತೆ ಬದಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ವೇಗವಾಗಿ ಒಂದು ಲಾರಿ ಇನ್ನೊಂದು ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.