ಉಡುಪಿ, ಮೇ. 05 (DaijiworldNews/TA): ಟ್ರಾಕ್ಟರ್ ಟಿಲ್ಲರ್ ವಾಹನ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಉಡುಪಿಯ ಕೊಕ್ಕರ್ಣೆ ಮೊಗವೀರ ಪೇಟೆ ಬಳಿ ನಡೆದಿದೆ. ಮೃತರನ್ನು ಪಕೀರಪ್ಪ ಎಂದು ಗುರುತಿಸಲಾಗಿದೆ.

ಟ್ಯಾಕ್ಟರ್ನಲ್ಲಿದ್ದ ಕೂಲಿ ಕಾರ್ಮಿಕ ಅಡಿಯಪ್ಪ ಮಾದರ ಗಾಯಗೊಂಡಿದ್ದಾರೆ. ಇವರು ಕೊಕ್ಕರ್ಣೆಗೆ ಹುಲ್ಲು ತೆಗೆಯಲು ಟ್ಯಾಕ್ಟರ್ ವಾಹನದಲ್ಲಿ ಹೋಗುತ್ತಿದ್ದಾಗ ಟ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆಯ ಬದಿ ಮಗುಚಿ ಬಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಚಾಲಕ ಪಕೀರಪ್ಪ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.