ಮಂಗಳೂರು,ಮೇ. 05 (DaijiworldNews/TA): ಬಜಪೆ ಬಸ್ಸು ನಿಲ್ದಾಣದಲ್ಲಿ ಬಸ್ಸಿನ ಟೈಮಿಂಗ್ಸ್ ವಿಚಾರವಾಗಿ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರ ನಡುವೆ ಪರಸ್ಪರ ಹೊಡೆದಾಟ ಸಂಭವಿಸಿರುವ ಘಟನೆ ವರದಿಯಾಗಿದೆ.

ಖಾಸಗಿ ಬಸ್ಸೊಂದರ ಚಾಲಕ ಶ್ರೀನಿವಾಸ (26) ಮತ್ತು ಇನ್ನೊಂದು ಬಸ್ಸಿನ ನಿರ್ವಾಹಕ ಸಂತೋಷ್ ಶೆಟ್ಟಿ (52) ಪರಸ್ಪರ ಹೊಡೆದಾಡಿಕೊಂಡವರು ಎಂದು ತಿಳಿದು ಬಂದಿದೆ. ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಬಜ್ಪೆ ಬಸ್ಸು ನಿಲ್ದಾಣದ ಬಳಿ ಬಂದಾಗ ಪೊಲೀಸರ ಮುಂದೆಯೇ ಈ ಇಬ್ಬರು ಅವಾಚ್ಯ ಶಬ್ಧಗಳಿಂದ ಬೈದು ಹೊಡೆದಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.