ಕಾಸರಗೋಡು, ಏ. 05 (DaijiworldNews/TA): ಬೇಳ ಶೋಕಮಾತಾ ದೇವಾಲಯದಲ್ಲಿ ಯೇಸು ಕ್ರಿಸ್ತರ ಪುನಾರುತ್ಥಾನದ ಹಬ್ಬ ಕಾಸರಗೋಡು ಧರ್ಮ ವಲಯದ ಪ್ರಧಾನ ದೇವಾಲಯದ ಬೇಳ ಶೋಕಮಾತಾ ದೇವಾಲಯದಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್ ಹಬ್ಬವು ಏಪ್ರಿಲ್ 4ರಂದು ನಡೆಯಿತು.



ಸಂಜೆ 7.00ಗಂಟೆಗೆ ಸರಿಯಾಗಿ ಈಸ್ಟರ್ ಮೋಂಬತ್ತಿಯ ಪವೀತ್ರಕರಣದೊಂದಿಗೆ ಹಬ್ಬದ ವಿಶೇಷ ಪ್ರಾರ್ಥನೆ ಆರಂಭವಾಯಿತು. ಬಳಿಕ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಸ್ಟ್ಯಾನಿ ಪಿರೇರಾ ಸ್ವಾಮಿ ಅವರ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು.
ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂದನನೀಯ ಡಾಕ್ಟರ್.ರೊಕಿ ರವಿ ಫೆರ್ನಾಂಡೀಸ್ ಸ್ವಾಮಿಯವರು ಬಲಿ ಪೂಜೆಯಲ್ಲಿ ಭಾಗಿಯಾಗಿದ್ದರು.ಎಲ್ಲಾ ಕ್ರೈಸ್ತ ಬಾಂಧವರು ಮೊಂಬತ್ತಿಯನ್ನು ಬೆಳಗಿಸಿ ಬಲಿ ಪೂಜೆಯಲ್ಲಿ ಭಾಗಿಯಾದರು.