ಮಂಗಳೂರು, ಏ. 05 (DaijiworldNews/TA): ಮಿಲಾಗ್ರಿಸ್ ಚರ್ಚ್ ನಲ್ಲಿ ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದರು. ವಂದನೀಯ ಬೊನಾವೆಂಚರ್ ನಜರೆತ್ ಬಲಿ ಪೂಜೆ ಅರ್ಪಿಸಿದರು.
ವಂದನೀಯ ಮ್ಯಾಕ್ಸಿಮ್ ರೊಸಾರಿಯೊ ಪ್ರಬೋಧನೆ ನೀಡಿದರು ವಂದನೀಯ ಪೂಜ್ಯ ಉದಯ್ ಫೆರ್ನಾಂಡಿಸ್ ಪಾಸ್ಕಾ ಸ್ತೋತ್ರವನ್ನು ಹಾಡಿದರು. ವಂದನೀಯ ಜೆರಾಲ್ಡ್ ಪಿಂಟೊ ಬೆಂಕಿ ಮತ್ತು ಪವಿತ್ರ ನೀರಿನ ಆಶೀರ್ವಚನ ನಡೆಸಿದರು. ವಂದನೀಯ ಪೂಜ್ಯ ಅವಿತ್ ಪಾಯ್ಸ್ ಮತ್ತು ಫ್ರಾಂಕ್ ಜೇಸನ್ ಪಿಂಟೊ ಸಹ ಬಲಿ ಪೂಜೆ ಅರ್ಪಿಸಿದರು. ಸ್ವಯಂಸೇವಕರು ಸೇವೆಗೆ ಮಾರ್ಗದರ್ಶನ ನೀಡಿದರು.