ಉಡುಪಿ, ಏ. 04 (DaijiworldNews/AK): ಕಟಪಾಡಿಯಲ್ಲಿ CSI ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೆಲ್ತ್ ಸೆಂಟರ್ ಉದ್ಘಾಟನೆ ಮಾಡಲಾಯಿತು.


CSI ಕರ್ನಾಟಕ ದಕ್ಷಿಣ ಪ್ರಾಂತ್ಯದ ಬಿಷಪ್ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಅವರು ಆಶಿರ್ವದಿಸಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಟಪಾಡಿಯಲ್ಲಿ ಇಂತಹ ಆಸ್ಪತ್ರೆ ಇಲ್ಲಿಯ ಸ್ಥಳದಲ್ಲಿ ಅಗತ್ಯವಿತ್ತು. ಹಾಗಾಗಿ ಇಂದು ಪ್ರಾರಂಭಿಸಿ ಜನರಿಗೆ ಲಭ್ಯವಾಗುವಂತಹ ಸೇವೆಯನ್ನು ನೀಡಲಿ. ಗ್ರಾಮೀಣ ಭಾಗದ ಜನರು ಕೂಡ ಇದರ ಪ್ರಯೋಜನವನ್ನು ಪಡೆಯಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಟಪಾಡಿಯ ಸಮಾಜದಲ್ಲಿ ಹೊಸತನವನ್ನು ನೀಡುವ ದೃಷ್ಠಿಯಿಂದ ಶಿಕ್ಷಣ ಮತ್ತು ಆರೋಗ್ಯ ಅಗತ್ಯವಿದೆ. ಡಾ ಸುಶೀಲ್ ಜತ್ತನ್ ಅವರು ಒಳ್ಳೆಯ ಕೆಲಸವನ್ನು ಇಂದು ಮಾಡಿದ್ದಾರೆ. ವೃತ್ತಿಯಲ್ಲಿ ಸಹ ಜನರಿಗೆ ತುಂಬಾ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
FMCI ಹಾಗೂ ಆಡಳಿತಾಧಿಕಾರಿ FMHMC & H ನಿರ್ದೇಶಕರು ಫಾ. ಫೌಸ್ಮಿನ್ ಲೂಕಸ್ ಲೋಬೋ, ಗೌರವ ಅತಿಥಿಗಳಾಗಿ ಡಾ. ಎ. ರವೀಂದ್ರನಾಥ ಶೆಟ್ಟಿ ಸರಸ್ಕೃತಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್, ಕಟಪಾಡಿ,,, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಭಾ ಬಿ. ಶೆಟ್ಟಿ , ಉದ್ಯಮಿ, ಕಟಪಾಡಿ ಇಕ್ಬಲ್ ಶಂಸುದ್ದೀನ್, ಕ್ರಿಶ್ಚಿಯನ್ ಡೆವಲಪ್ಮೆಂಟ್ ಕಾರ್ಪೊರೇಶನ್ ನಿರ್ದೇಶಕ ಪ್ರಶಾಂತ್ ಜತನ್ನ , ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.