ಉಡುಪಿ, ಏ. 04 (DaijiworldNews/TA): ಜಿಲ್ಲೆಯ ಅನೇಕ ಕಡೆಗಳಲ್ಲಿ ಮುಂಗಾರು ಪೂರ್ವ ಮಳೆ ಗಾಳಿ, ಗುಡುಗು-ಮಿಂಚಿನೊಂದಿಗೆ ಸುರಿಯುತ್ತಿದೆ. ಭಾರೀ ಮಳೆಗೆ ಮನೆ ಮೇಲೆ ಭಾರೀ ಮರವೊಂದು ಬಿದ್ದು ಹಾನಿಯಾದ ಘಟನೆ ನಡೆದಿದೆ.

ಭಾರೀ ಮಳೆಗೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ರಾಜು ನಾಯ್ಕ್ ಎಂಬವರ ವಾಸ್ತವ್ಯದ ಕಚ್ಛಾ ಮನೆ ಮೇಲೆ ಭಾರೀ ಮರವೊಂದು ಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ. ಇದರಿಂದ 1.50ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.