ಮಂಗಳೂರು, ಏ. 03 (DaijiworldNews/TA): ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಗುಡ್ ಫ್ರೈಡೇ ಅಂಗವಾಗಿ ಇಂದು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಾಗೂ ನಿರಾಶ್ರಿತರಿಗೆ ಹಣ್ಣುಹಂಪಲು ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಉದ್ಘಾಟಿಸಿದರು. ಬೆಥನಿ ಕನ್ಯಾ ಮಠದ ಜೇಷ್ಠರಾಗಿರುವ ಭಗಿನಿ ಶುಭಾರವರು ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟು ಆಶೀರ್ವದಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಶುಭಾಶಯ ಕೋರಿದರು.
ಸೈಂಟ್ ತೆರೆಸಾಸ್ ಸ್ಕೂಲ್ ಇದರ ಉಪ ಪ್ರಾಂಶುಪಾಲೆ ಭಗಿನಿ ವಿದ್ಯಾ, ಎಂಸಿಸಿ ಬ್ಯಾಂಕ್ ನ ಮಾಜಿ ಕಾರ್ಪೋರೇಟರ್ ಪದ್ಮಬಾಭ ಅಮೀನ್, ಸಿಂಥಿಯಾ ಮೊರಾಸ್, ಅರುಣ್ ಡಿಸೋಸಾ ಉರ್ವಾ, ಪ್ರೀಮಾ ಫೆರ್ನಾಂಡಿಸ್ ಎಕ್ಕೂರ್, ನವೀನ್ ಫೆರ್ನಾಂಡಿಸ್, ಓಸ್ವಲ್ಡ್ ಡಿಕುನ್ಹಾ ಬಿಜೈ, ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.