ಉಡುಪಿ, ಏ. 03 (DaijiworldNews/AK): ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯು ಕಟಪಾಡಿಯಲ್ಲಿ ಲೊಂಬಾರ್ಡ್ ಮಿಷನ್ ಆಸ್ಪತ್ರೆಯ ಹೊಸ ಆರೋಗ್ಯ ಕೇಂದ್ರವನ್ನು ಎಪ್ರಿಲ್ 4 ರಂದು ಉದ್ಘಾಟನೆಗೊಳ್ಳಲಿದೆ.

ಉದ್ಘಾಟನಾ ಸಮಾರಂಭವು ಬೆಳಗ್ಗೆ 10:30ಕ್ಕೆ ಕಟಪಾಡಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಈ ಹೊಸ ಆರೋಗ್ಯ ಕೇಂದ್ರವು ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಸುಲಭವಾಗಿ ಲಭ್ಯವಾಗುವ, ಕೈಗೆಟುಕುವ ಮತ್ತು ಮಾನವೀಯ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಈ ಸೇವೆಯನ್ನು ಸಿ.ಎಸ್.ಐ-ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ (KSD) ಬಿಷನ್ ಆಗಿರುವ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಅವರು ಆಶೀರ್ವದಿಸಿ ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, FMCI ಹಾಗೂ ಆಡಳಿತಾಧಿಕಾರಿ FMHMC & Hನಿರ್ದೇಶಕರಾದ ಫಾ. ಫೌಸ್ಮಿನ್ ಲೂಕಸ್ ಲೋಬೋ,ಗೌರವ ಅತಿಥಿಗಳಾಗಿ ಡಾ.ಎ.ರವೀಂದ್ರನಾಥ ಶೆಟ್ಟಿ ಸರಸ್ಕೃತಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್, ಕಟಪಾಡಿ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾ ಬಿ. ಶೆಟ್ಟಿ , ಉದ್ಯಮಿ, ಕಟಪಾಡಿ ಇಕ್ಬಲ್ ಶಂಸುದ್ದೀನ್,,, ಕ್ರಿಶ್ಚಿಯನ್ ಡೆವಲಪ್ಲೆಂಟ್ ಕಾರ್ಪೊರೇಶನ್ ನಿರ್ದೇಶಕರಾದ ಪ್ರಶಾಂತ್ ಜತನ್ನ , ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಪಿ ಆರ್ ಓ ರೋಹಿ ರತ್ನಾಕರ್ ಆಡಳಿತಾಧಿಕಾರಿ ಡೀನಾ ಪ್ರಭಾವತಿ, ಆಪರೇಷನ್ ಮ್ಯಾನೆಜರ್ ಕಾವ್ಯಶೆಟ್ಟಿ ಉಪಸ್ಥಿತರಿದ್ದರು.