ಮಂಗಳೂರು, ಏ. 02 (DaijiworldNews/AK): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳಪದವು ಎಂಬಲ್ಲಿ ಗುರುವಾರ ಸಂಜೆ ಲಾರಿ ಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡ ಯುವಕನನ್ನು ನಡುಪದವು ನಿವಾಸಿ ಬೇಬಿ ಎಂಬವರ ಮಗ ಸುಶಾಂತ್ (23) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಸುಶಾಂತ್ ರಸ್ತೆಗೆ ಎಸೆಯಲ್ಪಟ್ಟದ್ದು, ಈ ವೇಳೆ ತಲೆಗೆ ತೀವ್ರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯನ್ನು ಹಿಟ್ ಅಂಡ್ ರನ್ ಪ್ರಕರಣವೆಂದು ಪರಿಗಣಿಸಲಾಗಿದ್ದು, ಟ್ರಕ್ ಚಾಲಕ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ನಂತರ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ಅಜಾಗರೂಕತೆಯಿಂದ ಸ್ಥಳೀಯ ಸಾರ್ವಜನಿಕರಿಂದ ತೀವ್ರ ಆಕ್ರೋಶವಾಗಿದೆ.
ಅಪಘಾತದ ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಕೊಣಾಜೆ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿ ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಚಾಲಕನನ್ನು ಬಂಧಿಸಲು ಮತ್ತು ಘಟನೆಗಳ ನಿಖರವಾದ ಮಾಹಿತಿ ಪಡೆಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.