ಸುಳ್ಯ, ಫೆ. 16 (DaijiworldNews/TA): ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಹಾಶಿವರಾತ್ರಿ ಉತ್ಸವದ ಪ್ರಯಕ್ತ ಫೆ.16ರಂದು ಶ್ರೀ ದೇವರ ದರ್ಶನ ಬಲಿ ನಡೆಯಿತು.

ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ, ತುಲಾಭಾರ ಸೇವೆ ನಡೆಯಿತು. ಫೆ. 15ರಂದು ಸಂಜೆ ಸೀಮೆಯ ಭಜನಾ ತಂಡಗಳಿಂದ ಭಜನೆ ಹಾಗೂ ಕುಣಿತ ಭಜನೆ, ರಾಶಿಪೂಜೆ, ರಂಗಪೂಜೆ, ಉತ್ಸವ ಬಲಿ ನಡೆಯಿತು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ, ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು, ಮಾಲತಿ ಬೋಜಪ್ಪ ಗೌಡ, ವಸಂತ ಪೆಲ್ತಡ್ಕ ಸೇರಿದಂತೆ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.