ಬಂಟ್ವಾಳ, ಫೆ. 15 (DaijiworldNews/TA): ಬಿ.ಸಿ.ರೋಡು ಶ್ರೀ ಚಂಡಿಕಾ ಪರಮೇಶ್ಚರಿ ದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ಫೆ.12 ರಿಂದ 14 ರವೆರೆಗೆ ವಿಜ್ರಂಭಣೆಯಿಂದ ನಡೆಯಿತು.


ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವರ್ಷಂಪ್ರತಿಯಂತೆ ನಡೆಯಿತು. ಫೆ. 14 ರಂದು ದರ್ಶನ ಬಲಿ ಉತ್ಸವ ಹಾಗೂ ಶ್ರೀ ದೇವಿಗೆ ವಿಶೇಷ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ವೇಳೆ ದೇವಿಗೆ ವಿಶೇಷ ರಂಗ ಪೂಜೆ ನಡೆಯಲಿದೆ. ಫೆ.13 ರಂದು ನೂತನವಾಗಿ ನಿರ್ಮಾಣವಾದ ಅನ್ನಚತ್ರದ ಶುಭಾರಂಭ ನಡೆದಿದೆ.