ಉಳ್ಳಾಲ, ಫೆ. 10 (DaijiworldNews/TA): ಸಾರ್ವಜನಿಕ ದೂರುಗಳು ಹಾಗೂ ಅಪಘಾತಗಳ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತದ ನೇತೃತ್ವದಲ್ಲಿ ತೊಕ್ಕೊಟ್ಟು ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ತೊಕ್ಕೊಟ್ಟುವಿನಿಂದ ಅಸೈಗೋಳಿವರೆಗೆ ಹೆದ್ದಾರಿ ಬದಿಯ ಗೂಡಂಗಡಿಗಳ ತೆರವು ಕಾರ್ಯಾಚರಣೆ ಫೆ.09ರ ಬೆಳಗ್ಗಿನಿಂದ ಸಂಜೆಯವರೆಗೂ ಎರಡು ಜೆಸಿಬಿಗಳು ಹಾಗೂ 10 ಮಂದಿ ಕೆಲಸಗಾರರ ಮೂಲಕ ನಡೆಯಿತು.




50 ಕ್ಕೂ ಹೆಚ್ಚು ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಫೆ.2ರಂದು ಹೆದ್ದಾರಿ ಸಮೀಪದಲ್ಲಿ ಹಾಕಿರುವ ಗೂಡಂಗಡಿಗಳು, ಬೀದಿ ಬದಿ ವ್ಯಾಪಾರದ ಶೆಡ್ ಗಳಿಗೆ ತೆರವುಗೊಳಿಸಲು ಸ್ಟಿಕರ್ ಅಂಟಿಸಲಾಗಿತ್ತು. ಫೆ.5 ರ ಒಳಗೆ ತೆರವು ನಡೆಸುವಂತೆ ಸೂಚನೆ ನೀಡಲಾಗಿತ್ತು. ಬಳಿಕ ಎರಡು ದಿನಗಳ ಕಾಲ ಹೆಚ್ಚು ದಿನ ಮುಂದೂಡಿ ತೆರವು ಕರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.